×
Ad

ಎಪ್ರಿಲ್‌ ಕೊನೆಯ ವಾರದ ತನಕ ಜೈಲಿನಲ್ಲಿಯೇ ಉಳಿಯಲಿರುವ ಕೇಜ್ರಿವಾಲ್‌

Update: 2024-04-15 15:32 IST

ಅರವಿಂದ್‌ ಕೇಜ್ರಿವಾಲ್‌ | PC : PTI 

ಹೊಸದಿಲ್ಲಿ: ದಿಲ್ಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ದಿಲ್ಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ತಮ್ಮ ಬಿಡುಗಡೆ ಕೋರಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಇಂದು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶಾನಲಯ(ಈಡಿ)ಕ್ಕೆ ನೋಟಿಸ್‌ ಜಾರಿಗೊಳಿಸಿದೆ.

ಈಡಿ ಉತ್ತರಕ್ಕೆ ಕಾಯದೆ ಮಧ್ಯಂತರ ಬಿಡುಗಡೆ ಕೋರಿ ಕೇಜ್ರಿವಾಲ್‌ ಅವರು ಸಲ್ಲಿಸಿದ್ದ ಅಪೀಲನ್ನು ಪರಿಗಣಿಸಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ. ಮುಂದಿನ ವಿಚಾರಣೆ ಎಪ್ರಿಲ್‌ ಕೊನೆಯ ವಾರಕ್ಕೆ ನಿಗದಿಯಾಗಿದೆ.

ಲೋಕಸಭಾ ಚುನಾವಣೆಯ ಮೊದಲ ಹಂತ ಎಪ್ರಿಲ್‌ 19ರಂದು ನಡೆಯಲಿರುವುದರಿಂದ ಅದರ ನಂತರದ ಹತ್ತು ದಿನಗಳವರೆಗೂ ಕೇಜ್ರಿವಾಲ್‌ ಜೈಲಿನಲ್ಲಿಯೇ ಉಳಿಯುವಂತಾಗಿದೆ.

ಕೇಜ್ರಿವಾಲ್‌ ಅವರ ಅರ್ಜಿಯನ್ನು ಇದೇ ಶುಕ್ರವಾರ ಕೈಗೆತ್ತಿಕೊಳ್ಳಬೇಕೆಂದು ಅವರ ವಕೀಲ ಅಭಿಷೇಕ್‌ ಮನು ಸಿಂಘ್ವಿ ಮನವಿ ಮಾಡಿದರೂ ನ್ಯಾಯಾಲಯ ನಿರಾಕರಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News