×
Ad

ಕೇರಳ | ಧರ್ಮಾದಂ ಕ್ಷೇತ್ರ ಕಡುಬಡತನ ಮುಕ್ತ: ಸಿಎಂ ಪಿಣರಾಯಿ ವಿಜಯನ್ ಘೋಷಣೆ

Update: 2025-04-13 19:33 IST

ಪಿಣರಾಯಿ ವಿಜಯನ್ | PC : PTI 

ಕಣ್ಣೂರು: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಸ್ವಕ್ಷೇತ್ರವಾದ ಧರ್ಮಾದಂ ವಿಧಾನಸಭಾ ಕ್ಷೇತ್ರವನ್ನು ಅಧಿಕೃತವಾಗಿ ಕಡು ಬಡತನ ಮುಕ್ತ ಕ್ಷೇತ್ರ ಎಂದು ಘೋಷಿಸಲಾಗಿದ್ದು, ರಾಜ್ಯದಲ್ಲಿ ಈ ಮಾನ್ಯತೆಗೆ ಪಾತ್ರವಾದ ಪ್ರಪ್ರಥಮ ಕ್ಷೇತ್ರವಾಗಿ ಹೊರಹೊಮ್ಮಿದೆ.

ರವಿವಾರ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಸಂಗತಿಯನ್ನು ಎಕ್ಸ್ ನಲ್ಲಿ ಪ್ರಕಟಿಸಿದ್ದಾರೆ. “ಕೇರಳದಲ್ಲಿನ ಮೊಟ್ಟಮೊದಲ ಕಡು ಬಡತನ ಮುಕ್ತ ವಿಧಾನಸಭಾ ಕ್ಷೇತ್ರವೆಂದು ಧರ್ಮಾದಂ ವಿಧಾನಸಭಾ ಕ್ಷೇತ್ರವನ್ನು ಘೋಷಿಸಲಾಗಿದೆ!” ಎಂದು ಅವರು ಪೋಸ್ಟ್ ಮಾಡಿದ್ದಾರೆ.

“ನಮ್ಮ ರಾಜ್ಯದ ಜನಸಂಖ್ಯೆಯಲ್ಲಿ ಶೇ. 1ಕ್ಕಿಂತಲೂ ಕಡಿಮೆ ಮಂದಿ ಕಡು ಬಡತನದಲ್ಲಿದ್ದು, ನವೆಂಬರ್ 1ರಂದು ಇಡೀ ರಾಜ್ಯವನ್ನು ಕಡು ಬಡತನ ಮುಕ್ತ ಎಂದು ಘೋಷಿಸುವ ದಿಕ್ಕಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಇದು ನಮ್ಮ ಒಳಗೊಳ್ಳುವಿಕೆ ಅಭಿವೃದ್ಧಿ ಪಯಣದಲ್ಲಿನ ಮೈಲಿಗಲ್ಲಾಗಿದೆ” ಎಂದು ಅವರು #KeralaModel ಹ್ಯಾಶ್ ಟ್ಯಾಗ್ ಬಳಸಿ, ಬರೆದುಕೊಂಡಿದ್ದಾರೆ.

ಇದಕ್ಕೂ ಮುನ್ನ, ಇಡೀ ದೇಶದಲ್ಲಿ ಕೇರಳ ಈಗಾಗಲೇ ಅತ್ಯಂತ ಕಡಿಮೆ ಬಡತನ ದರವನ್ನು ಹೊಂದಿದೆ. ಇದೀಗ ರಾಜ್ಯದಿಂದ ಕಡು ಬಡತನವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವತ್ತ ಸರಕಾರ ಗಮನ ಹರಿಸಿದೆ ಎಂದು ಪಿಣರಾಯಿ ವಿಜಯನ್ ಹೇಳಿದ್ದರು.

ಪಿಣರಾಯಿ ವಿಜಯನ್ ನೇತೃತ್ವದ ಎಡ ಪ್ರಜಾಸತ್ತಾತ್ಮಕ ರಂಗ ಮೈತ್ರಿಕೂಟ ಸರಕಾರದ ಎರಡನೆ ಅವಧಿಯ ನಾಲ್ಕನೆ ವಾರ್ಷಿಕೋತ್ಸವ ದಿನವಾದ ನವೆಂಬರ್ 1, 2025ರ ವೇಳೆಗೆ ಈ ಗುರಿಯನ್ನು ತಲುಪುವ ಉದ್ದೇಶವನ್ನು ಕೇರಳ ಸರಕಾರ ಹೊಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News