×
Ad

ಕೇರಳ: ಬಾಲಕಿಯ ಅಪಹರಿಸಿ ಲೈಂಗಿಕ ದೌರ್ಜನ್ಯ

Update: 2023-09-07 22:39 IST

ಸಾಂದರ್ಭಿಕ ಚಿತ್ರ.

ಕೊಚ್ಚಿ: ವಲಸೆ ಕಾರ್ಮಿಕರ ಕುಟುಂಬದ 8 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರಗೈದ ಘಟನೆ ಕೊಚ್ಚಿ ಸಮೀಪದ ಆಲುವಾದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿ ತಿರುವನಂತಪುರದ ಪಾರಸ್ಸಾಲಾದ ಚೆಂಕಲ್ನ ನಿವಾಸಿ ರೌಡಿ ಶೀಟರ್ ಕ್ರಿಸ್ಟಿಲ್ ಆಲಿಯಾಸ್ ಸತೀಶ್ (36) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಈತನ ವಿರುದ್ಧ ಸುಮಾರು 15 ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ. ಈತ ಆಗಸ್ಟ್ 10ರಂದು ಜಾಮೀನಿನಲ್ಲಿ ಬಿಡುಗಡೆಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ತನ್ನ ಮನೆಯೊಳಗೆ ನಿದ್ರಿಸುತ್ತಿದ್ದ ಬಾಲಕಿಯನ್ನು ಕ್ರಿಸ್ಟಿಲ್ ಗುರುವಾರ ಮುಂಜಾನೆ 2 ಗಂಟೆಗೆ ಅಪಹರಿಸಿ, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News