×
Ad

ಕೇರಳ: ಹಾಸಿಗೆಯಲ್ಲಿ ಮಲ ವಿಸರ್ಜಿಸಿದರೆಂದು ಅನಾರೋಗ್ಯ ಪೀಡಿತ ತಂದೆಯನ್ನೇ ಕೊಂದ ಪುತ್ರ

Update: 2023-11-25 21:46 IST

ಆರೋಪಿ ಸೆಬಿನ್ ಕ್ರಿಶ‍್ಚಿಯನ್, ಮೃತ ವ್ಯಕ್ತಿ ಸೆಬಾಸ್ಟಿನ್ | Photocradit :onmanorama.com

ಅಲಪ್ಪುಝ: ಹಾಸಿಗೆಯಲ್ಲಿ ಮಲ ವಿಸರ್ಜಿಸಿದರೆಂದು ಅನಾರೋಗ್ಯಪೀಡಿತ ತಂದೆಯನ್ನೇ ಪುತ್ರನೊಬ್ಬ ಹತ್ಯೆಗೈದಿರುವ ಆಘಾತಕಾರಿ ಘಟನೆ ಇಲ್ಲಿನ ಸಮೀಪದ ಪುನ್ನಪ್ರದಲ್ಲಿ ನಡೆದಿದೆ ಎಂದು onmanorama.com ವರದಿ ಮಾಡಿದೆ.

ಮೃತ ವ್ಯಕ್ತಿಯನ್ನು ಸೆಬಾಸ್ಟಿನ್ (65) ಎಂದು ಗುರುತಿಸಲಾಗಿದ್ದು, ಅವರ ಹಿರಿಯ ಪುತ್ರನಾದ ಆರೋಪಿ ಸೆಬಿನ್ ಕ್ರಿಶ‍್ಚಿಯನ್(26)ನನ್ನು ಪೊಲೀಸರು ಬಂಧಿಸಿದ್ದಾರೆ.

ತನ್ನ ತಂದೆಯು ಹಾಸಿಗೆಯಲ್ಲೇ ಮಲ ವಿಸರ್ಜನೆ ಮಾಡುವುದು ಹಾಗೂ ಆಹಾರ ಸೇವಿಸಲು ನಿರಾಕರಿಸುತ್ತಿದ್ದುರಿಂದ ಆಕ್ರೋಶಗೊಂಡಿದ್ದ ಆರೋಪಿಯು ಸಿಟ್ಟಿನಲ್ಲಿ ಈ ಕೃತ್ಯವೆಸಗಿದ್ದಾನೆ ಎಂಬ ಸಂಗತಿ ಪ್ರಾಥಮಿಕ ತನಿಖೆಯ ಸಂದರ್ಭದಲ್ಲಿ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಂಟು ತಿಂಗಳ ಹಿಂದೆ ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಸೆಬಾಸ್ಟಿಯನ್, ಅಂದಿನಿಂದ ಹಾಸಿಗೆ ಹಿಡಿದಿದ್ದರು. ಅವರ ಪತ್ನಿ ಎಂಟು ತಿಂಗಳ ಹಿಂದಷ್ಟೆ ಕ್ಯಾನ್ಸರ್ ನಿಂದ ತೀರಿಕೊಂಡಿದ್ದರು. ಸೆಬಾಸ್ಟಿಯನ್ ಆರೈಕೆಯನ್ನು ಅವರ ಮಕ್ಕಳು ನೋಡಿಕೊಳ್ಳುತ್ತಿದ್ದರು ಎಂದು ಹೇಳಲಾಗಿದೆ.



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News