×
Ad

ಗಂಟಲಲ್ಲಿ ಕಪ್ ಕೇಕ್ ಸಿಲುಕಿಕೊಂಡು ಮಹಿಳೆ ಮೃತ್ಯು; ಮಗಳ ಮದುವೆಯ ಮುನ್ನಾ ದಿನ ನಡೆದ ದುರಂತ

Update: 2025-06-01 16:48 IST

ಝೈನಬಾ |  credit : mathrubhumi.com 

ಮಲಪ್ಪುರಂ: ಮಗಳ ಮದುವೆಗೆ ಇನ್ನು ಒಂದು ದಿನ ಬಾಕಿಯಿರುವಾಗ, ಗಂಟಲಲ್ಲಿ ಕೇಕ್ ಸಿಲುಕಿಕೊಂಡು ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯ ತನಲೂರಿನಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಮೃತ ಮಹಿಳೆಯನ್ನು ತನಲೂರು ಗ್ರಾಮದ ಝೈನಬಾ (44) ಎಂದು ಗುರುತಿಸಲಾಗಿದೆ.

ಬುಧವಾರದಂದು ಝೈನಬಾರ ನಿವಾಸದಲ್ಲಿ ಅವರ ಪುತ್ರಿಯ ವಿವಾಹ ಪೂರ್ವ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ವೇಳೆ ಉಳಿದಿದ್ದ ಕೇಕ್ ಅನ್ನು ಮನೆಯಲ್ಲಿ ಇಡಲಾಗಿತ್ತು. ಗುರುವಾರ ಬೆಳಗ್ಗೆ ಚಹಾ ಸೇವಿಸುವಾಗ, ಝೈನಬಾ ಉಳಿದಿದ್ದ ಕೇಕ್ ಅನ್ನು ಅದರೊಂದಿಗೆ ಸೇವಿಸಿದ್ದಾರೆ.

ಅದನ್ನು ಸೇವಿಸುತ್ತಿದ್ದಂತೆಯೇ ಗಂಟಲಲ್ಲಿ ಸಿಲುಕಿಕೊಂಡು, ಜೈನಬಾರಿಗೆ ಉಸಿರಾಟದ ತೊಂದರೆಯುಂಟಾಗಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸತತ ವೈದ್ಯಕೀಯ ಪ್ರಯತ್ನಗಳ ಹೊರತಾಗಿಯೂ ಶುಕ್ರವಾರದಂದು ಝೈನಬಾ ನಿಧನರಾಗಿದ್ದಾರೆ.

ಝೈನಬಾರ ನಿಧನದಿಂದಾಗಿ ಶನಿವಾರ (ಮೇ 31) ವಿವಾಹ ಕಾರ್ಯಕ್ರಮದ ಭಾಗವಾಗಿ ನಡೆಯಬೇಕಿದ್ದ ಅವರ ಪುತ್ರಿಯ ನಿಖಾ ಶಾಸ್ತ್ರವನ್ನು ಕೆಲವೇ ಜನರ ಸಮ್ಮುಖದಲ್ಲಿ ನೆರವೇರಿಸಲಾಗಿದ್ದು, ಬಾಕಿ ಕಾರ್ಯಕ್ರಮಗಳನ್ನು ಮುಂದೂಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News