×
Ad

“ತುಂಬಾ ಅಪಾಯಕಾರಿ ಮನುಷ್ಯ” : ʼವೋಟ್ ಅಧಿಕಾರ ಯಾತ್ರೆʼಯಲ್ಲಿ ಮೋದಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಾಗ್ಧಾಳಿ

“ಬಿಜೆಪಿ ಅಧಿಕಾರದಲ್ಲಿರುವವರೆಗೆ ಜನರ ಮತಗಳು, ಹಕ್ಕುಗಳು ಸುರಕ್ಷಿತವಾಗಿರುವುದಿಲ್ಲ”

Update: 2025-08-17 17:25 IST

Photo credit: PTI

ಪಾಟ್ನಾ : ಪ್ರಧಾನಿ ನರೇಂದ್ರ ಮೋದಿ ಅವರ ಸ್ವಾತಂತ್ರ್ಯ ದಿನದ ಭಾಷಣದ ಕುರಿತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರವಿವಾರ ತೀವ್ರ ವಾಗ್ದಾಳಿ ನಡೆಸಿದ್ದು,"ತುಂಬಾ ಅಪಾಯಕಾರಿ ಮನುಷ್ಯ" ಅವರನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂದು ಹೇಳಿದರು.

ಬಿಹಾರದ ಸಸಾರಾಂನಲ್ಲಿ ವಿರೋಧ ಪಕ್ಷದ ವೋಟ್ ಅಧಿಕಾರ ಯಾತ್ರೆಯನ್ನುದ್ದೇಶಿಸಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸದ ಹೊರತು, ಜನರ ಮತಗಳು, ಹಕ್ಕುಗಳು ಮತ್ತು ಸ್ವಾತಂತ್ರ್ಯ ಸುರಕ್ಷಿತವಾಗಿರುವುದಿಲ್ಲ ಎಂದು ಹೇಳಿದರು.

ಆರೆಸ್ಸೆಸ್ ದೇಶದ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದೆ ಎಂದ ಮಲ್ಲಿಕಾರ್ಜುನ ಖರ್ಗೆ, ಕೆಂಪು ಕೋಟೆಯಿಂದ ಆರೆಸ್ಸೆಸ್‌ ಅನ್ನು ಹೊಗಳಿದ್ದಕ್ಕೆ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದರು.

ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ನಿಮ್ಮ ಜನರು ಯಾರೂ ಜೈಲಿಗೆ ಹೋಗಿಲ್ಲ. ಅವರು ಬ್ರಿಟಿಷರಿಗೆ ಉದ್ಯೋಗಕ್ಕಾಗಿ ಅರ್ಜಿಗಳನ್ನು ನೀಡುತ್ತಿದ್ದರು. ಅವರು ಬ್ರಿಟಿಷರ ಜೊತೆ ಇರುವುದಾಗಿ ಹೇಳುತ್ತಿದ್ದರು. ಪ್ರಧಾನಿ ಮೋದಿ ಕೆಂಪು ಕೋಟೆಯಿಂದ ಅಂತಹ ಜನರ ಹೆಸರುಗಳನ್ನು ಹೇಳುತ್ತಿದ್ದರೆ, ನಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ಆತ್ಮಗಳು ಇಂದು ಏನು ಹೇಳುತ್ತಿರಬಹುದು? ಎಂದು ಖರ್ಗೆ ಪ್ರಶ್ನಿಸಿದರು.

ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರಕಾರ ಅಧಿಕಾರದಲ್ಲಿರುವವರೆಗೆ ಸಂವಿಧಾನವು ಅಪಾಯದಲ್ಲಿದೆ ಮತ್ತು ಜನರ ಹಕ್ಕುಗಳು ಸುರಕ್ಷಿತವಾಗಿರುವುದಿಲ್ಲ. ಸ್ವಾತಂತ್ರ್ಯಕ್ಕಾಗಿ ಮಡಿದ ಲಕ್ಷಾಂತರ ಜನರ ಆತ್ಮಗಳು ಇಂದು ಏನು ಹೇಳುತ್ತಿರಬಹುದು? ನಮ್ಮ ವಿರುದ್ಧ ಮಾತನಾಡುವ ಓರ್ವ ವ್ಯಕ್ತಿ ಇದ್ದಾನೆ ಎಂದು ಅವರು ಹೇಳುತ್ತಿರಬಹುದು. ಅದಕ್ಕಾಗಿಯೇ ಈ ವ್ಯಕ್ತಿ (ಪ್ರಧಾನಿ ಮೋದಿ) ತುಂಬಾ ಅಪಾಯಕಾರಿ ವ್ಯಕ್ತಿ ಎಂದು ನಾನು ಹೇಳುತ್ತೇನೆ ಎಂದು ಖರ್ಗೆ ಹೇಳಿದರು.

ಪ್ರಧಾನಿ ಮೋದಿ ಜನರ ಮತಗಳನ್ನು, ಯುವಕರ ಉದ್ಯೋಗಗಳನ್ನು ಮತ್ತು ರೈತರ ಕನಿಷ್ಠ ಬೆಂಬಲ ಬೆಲೆಯನ್ನು ನಿಮ್ಮ ಹಕ್ಕುಗಳನ್ನು ಕಳ್ಳತನ ಮಾಡುತ್ತಾರೆ. ಅವರು ಓರ್ವ ಕಳ್ಳ ಮತ್ತು ಆ ಕಳ್ಳನನ್ನು ಕೆಳಗಿಳಿಸುವುದು ಅವಶ್ಯಕ ಎಂದು ಖರ್ಗೆ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News