×
Ad

SIR ವಿರುದ್ಧ ಖರ್ಗೆ, ಸೋನಿಯಾ, ರಾಹುಲ್ ಗಾಂಧಿ ಮತ್ತಿತರರಿಂದ ಸಂಸತ್ ಭವನದೆದುರು ಪ್ರತಿಭಟನೆ

Update: 2025-12-02 18:10 IST

Photo Credit : PTI 

ಹೊಸದಿಲ್ಲಿ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತಿತರ ವಿರೋಧ ಪಕ್ಷಗಳ ನಾಯಕರು ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ ಅಭಿಯಾನದ (SIR) ವಿರುದ್ಧ ಸಂಸತ್ ಭವನದೆದುರು ಮಂಗಳವಾರ ಪ್ರತಿಭಟನೆ ನಡೆಸಿದ್ದು, ಚುನಾವಣಾ ಸುಧಾರಣೆಗಳ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಈ ವೇಳೆ ವಿರೋಧ ಪಕ್ಷಗಳ ನಾಯಕರು ಮತಪಟ್ಟಿಗಳ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯ ವಿರುದ್ಧ ಪೋಸ್ಟರ್‌ ಗಳನ್ನು ಹಿಡಿದುಕೊಂಡಿದ್ದರು. ಇದರೊಂದಿಗೆ, "SIR ನಿಲ್ಲಿಸಿ - ಮತಗಳ್ಳತನವನ್ನು ಸ್ಥಗಿತಗೊಳಿಸಿ" ಎಂಬ ಬೃಹತ್ ಬ್ಯಾನರ್ ಅನ್ನೂ ಪ್ರದರ್ಶಿಸಿದರು. ಇದೇ ವೇಳೆ ಸರಕಾರದ ವಿರುದ್ಧ ಘೋಷಣೆಗಳನ್ನೂ ಕೂಗಿದರು.

ಸಂಸತ್ ಭವನದ ಮಕರ ದ್ವಾರದೆದುರು ನಡೆದ ಈ ಪ್ರತಿಭಟನೆಯಲ್ಲಿ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಡಿಎಂಕೆ ನಾಯಕರಾದ ಕನಿಮೋಳಿ ಹಾಗೂ ಟಿ.ಆರ್.ಬಾಲು ಸೇರಿದಂತೆ ವಿವಿಧ ವಿರೋಧ ಪಕ್ಷಗಳ ನಾಯಕರು ಪಾಲ್ಗೊಂಡಿದ್ದರು

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News