×
Ad

ಕೋಲ್ಕತಾ | ಹಾಸ್ಟೆಲ್‌ನ ವಾರ್ಡನ್ ಪತಿ ಮತ್ತು ಶಿಕ್ಷಕನಿಂದ ಬಾಲಕಿಯರಿಗೆ ಲೈಂಗಿಕ ಕಿರುಕುಳ, ಮೂವರ ಬಂಧನ

Update: 2024-09-23 20:51 IST

PC : indiatoday.in

ಕೋಲ್ಕತಾ : ನಗರದ ಹಾಸ್ಟೆಲೊಂದರಲ್ಲಿ ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳದ ಆರೋಪದಲ್ಲಿ ಮೂವರನ್ನು ಕೋಲ್ಕತಾ ಪೋಲಿಸರು ಬಂಧಿಸಿದ್ದಾರೆ. ವಾರ್ಡನ್ ಪತಿ ಮತ್ತು ಓರ್ವ ಶಿಕ್ಷಕ ಅಪ್ರಾಪ್ತ ಬಾಲಕಿಯರಿಗೆ ಹಲವಾರು ಬಾರಿ ಲೈಂಗಿಕ ಕಿರುಕುಳಗಳನ್ನು ನೀಡಿದ್ದರು ಎನ್ನಲಾಗಿದೆ.

ನಗರದ ಹರಿದೇವಪುರ ಪ್ರದೇಶದಲ್ಲಿಯ ಸೈಂಟ್ ಸ್ಟಿಫನ್ಸ್ ಶಾಲೆಯ ಹಾಸ್ಟೆಲ್‌ನಲ್ಲಿ ಈ ಘಟನೆ ನಡೆದಿದ್ದು, ರವಿವಾರ ಮಕ್ಕಳ ಪೋಷಕರು ಸಭೆಗಾಗಿ ಆಗಮಿಸಿದಾಗ ಬಯಲಿಗೆ ಬಂದಿದೆ. ಬಾಲಕಿಯರು ತಮ್ಮ ಸಂಕಷ್ಟಗಳನ್ನು ಹೇಳಿಕೊಂಡ ಬಳಿಕ ಪೋಷಕರು ಪೋಲಿಸರ ಬಳಿ ದೂರನ್ನು ದಾಖಲಿಸಿದ್ದರು.

ಬಲ್ಲಮೂಲಗಳು ತಿಳಿಸಿರುವಂತೆ, ಹಾಸ್ಟೆಲ್ ವಾರ್ಡನ್ ಮದುವೆ ಕೆಲವು ದಿನಗಳ ಹಿಂದಷ್ಟೇ ನಡೆದಿದ್ದು, ಅಂದಿನಿಂದಲೂ ಆಗಾಗ್ಗೆ ಹಾಸ್ಟೆಲ್‌ಗೆ ಭೇಟಿ ನೀಡುತ್ತಿದ್ದ ಆಕೆಯ ಪತಿ ರಾತ್ರಿ ಪತ್ನಿಯೊಂದಿಗೆ ಉಳಿದುಕೊಳ್ಳುತ್ತಿದ್ದ. ಹಾಸ್ಟೆಲ್ ಅಧಿಕಾರಿಗಳಿಗೆ ಗೊತ್ತಿಲ್ಲದೆ ಅಥವಾ ಅವರ ಅನುಮತಿಯಿಲ್ಲದೆ ಈ ಭೇಟಿಗಳು ನಡೆಯುತ್ತಿದ್ದವು.

ಪೋಲಿಸರು ವಾರ್ಡನ್, ಖಾಸಗಿ ಇಂಗ್ಲಿಷ್ ಶಿಕ್ಷಕ ವಿಶ್ವಾನಾಥ ಸಿಲ್ ಮತ್ತು ಸೊವೊನ್ ಮಂಡಲ್ ಎನ್ನುವವರನ್ನು ಬಂಧಿಸಿದ್ದು, ವಾರ್ಡನ್ ಪತಿ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News