×
Ad

ಕೋಲ್ಕತಾ: ಪಾಕ್ ಗೂಢಚಾರಿಯ ಬಂಧನ

Update: 2023-08-26 21:59 IST

ಸಾಂದರ್ಭಿಕ ಚಿತ್ರ

ಕೋಲ್ಕತಾ: ಪಾಕಿಸ್ತಾನದ ಗೂಢಚಾರಿ ಎಂದು ನಂಬಲಾಗಿರುವ ವ್ಯಕ್ತಿಯನ್ನು ಕೋಲ್ಕತಾದಲ್ಲಿ ಬಂಧಿಸಲಾಗಿದ್ದು, ಆತನ ಬಳಿಯಿಂದ ಸೂಕ್ಷ್ಮದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ಶನಿವಾರ ಇಲ್ಲಿ ತಿಳಿಸಿದರು.

ಆರೋಪಿತ ಪಾಕ್ ಗೂಢಚಾರಿ ಬಿಹಾರ ನಿವಾಸಿಯಾಗಿದ್ದಾನೆ ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ.

ಸುಳಿವಿನ ಮೇರೆಗೆ ಶುಕ್ರವಾರ ಆರೋಪಿಯನ್ನು ಆತನ ಹೌರಾ ನಿವಾಸದಿಂದ ಬಂಧಿಸಲಾಗಿದೆ.

ಆರೋಪಿಯು ದೇಶದ ಸುರಕ್ಷತೆಗೆ ಹಾನಿಯನ್ನುಂಟು ಮಾಡುವ ಚಟುವಟಿಕೆಗಳಲ್ಲಿ ನೇರವಾಗಿ ತೊಡಗಿಕೊಂಡಿದ್ದ ಎನ್ನುವುದು ಬೆಳಕಿಗೆ ಬಂದಿದೆ. ಗಂಟೆಗಳ ಕಾಲ ವಿಚಾರಣೆಯ ಬಳಿಕ ಶುಕ್ರವಾರ ತಡರಾತ್ರಿ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೋರ್ವರನ್ನು ಉಲ್ಲೇಖಿಸಿ ವರದಿಯು ತಿಳಿಸಿದೆ. ಆರೋಪಿಯ ಮೊಬೈಲ್ ಫೋನ್ನಲ್ಲಿ ಛಾಯಾಚಿತ್ರಗಳು,ವೀಡಿಯೊಗಳು ಮತ್ತು ಆನ್ಲೈನ್ ಚಾಟ್ಗಳ ರೂಪದಲ್ಲಿ ರಹಸ್ಯ ಮಾಹಿತಿಗಳು ಪತ್ತೆಯಾಗಿವೆ. ಆತ ಇವುಗಳನ್ನು ಶಂಕಿತ ಪಾಕ್ ಗುಪ್ತಚರ ಏಜೆಂಟ್ಗೆ ಕಳುಹಿಸಿದ್ದ ಎಂದು ವರದಿಯು ಹೇಳಿದೆ.

ಕೋಲ್ಕತಾದಲ್ಲಿ ಕೊರಿಯರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಆರೋಪಿಯು ಮೊದಲು ದಿಲ್ಲಿಯಲ್ಲಿ ವಾಸವಾಗಿದ್ದ ಎಂದೂ ವರದಿಯು ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News