×
Ad

ಕೋಟಾ: ಕುಸಿದು ಬಿದ್ದು ಜೆಇಇ ಆಕಾಂಕ್ಷಿ ಸಾವು

Update: 2024-02-16 22:20 IST

ಕೋಟಾ (ರಾಜಸ್ಥಾನ): ಜೆಇಇ ಆಕಾಂಕ್ಷಿಯೋರ್ವ ಇಲ್ಲಿನ ತನ್ನ ಪಿಜಿ ವಸತಿ ಗೃಹದಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾನೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಮೃತಪಟ್ಟ ವಿದ್ಯಾರ್ಥಿಯನ್ನು ಜಾರ್ಖಂಡ್ನ ಜೆಮ್ಶೆದ್ಪುರದ ನಿವಾಸಿ ಪ್ರಣೀತ್ ರಾಯ್ (18) ಎಂದು ಗುರುತಿಸಲಾಗಿದೆ. 12ನೇ ತರಗತಿ ವಿದ್ಯಾರ್ಥಿಯಾಗಿದ್ದ ಈತ ಇತ್ತೀಚೆಗೆ ನಡೆದ ಜೆಇಇ ಮುಖ್ಯ ಪರೀಕ್ಷೆಗೆ ಹಾಜರಾಗಿದ್ದ ಹಾಗೂ ಉತ್ತಮ ಅಂಕಗಳನ್ನು ಪಡೆದಿದ್ದ ಎಂದು ಪೊಲೀಸ್ ಉಪ ಆಯುಕ್ತರಾದ ಭವಾನಿ ಸಿಂಗ್ ತಿಳಿಸಿದ್ದಾರೆ.

ಇಲ್ಲಿನ ಪಿಜಿ ವಸತಿ ಗೃಹದ ತನ್ನ ಕೊಠಡಿಯಲ್ಲಿ ಗುರುವಾರ ರಾತ್ರಿ ಪ್ರಣೀತ್ ರಾಯ್ ತನ್ನ ಗೆಳೆಯರೊಂದಿಗೆ ಹರಟೆ ಹೊಡೆಯುತ್ತಿದ್ದ ಸಂದರ್ಭ ಕುಸಿದು ಬಿದ್ದಿದ್ದಾನೆ. ಗೆಳೆಯರು ಕೂಡಲೇ ಫೋನ್ ಕರೆ ಮಾಡಿ ಆತನ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ. ಆದರೆ, ಆತನ ಆರೋಗ್ಯ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಆ್ಯಂಬುಲೆನ್ಸ್ ನಲ್ಲಿ ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಪ್ರಣೀತ್ ರಾಯ್ ಯಾವುದೇ ರೀತಿಯ ಗಂಭೀರ ರೋಗದಿಂದ ಬಳಲುತ್ತಿರಲಿಲ್ಲ. ಆತನಿಗೆ ಶೀತ ಹಾಗೂ ಕೆಮ್ಮು ಮಾತ್ರ ಇತ್ತು ಎಂದು ಅವರು ತಿಳಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News