ಕುಂಭಮೇಳದ ಕಾಲ್ತುಳಿತ ದುರಂತ ದೊಡ್ಡ ಸಂಗತಿಯಲ್ಲ: ಬಿಜೆಪಿ ಸಂಸದೆ ಹೇಮಾಮಾಲಿನಿ ವಿವಾದಾತ್ಮಕ ಹೇಳಿಕೆ
Update: 2025-02-04 21:12 IST
ಹೇಮಾಮಾಲಿನಿ | PTI
ಹೊಸದಿಲ್ಲಿ: ಪ್ರಯಾಗ್ರಾಜ್ನಲ್ಲಿ ಮಹಾಕುಂಭಮೇಳದಲ್ಲಿ ಅನೇಕ ಮಂದಿಯ ಸಾವಿಗೆ ಕಾರಣವಾದ ಕಾಲ್ತುಳಿತದ ದುರಂತ ದೊಡ್ಡ ಸಂಗತಿಯೇನೂ ಅಲ್ಲವೆಂದು ಹೇಳುವ ಮೂಲಕ ಬಿಜೆಪಿಯ ಲೋಕಸಭಾ ಸದಸ್ಯೆ ಹೇಮಾಮಾಲಿನಿ ವಿವಾದದ ಕಿಡಿಹಚ್ಚಿದ್ದಾರೆ.
ಹೊಸದಿಲ್ಲಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘‘ಮಹಾಕುಂಭಮೇಳದ ಕಾಲ್ತುಳಿತದ ಘಟನೆಯನ್ನು ಉತ್ಫ್ರೇಕ್ಷಿಸಲಾಗುತ್ತಿದೆ ಹಾಗೂ ಈ ಉತ್ಸವವನ್ನು ಉತ್ತರಪ್ರದೇಶ ಸರಕಾರ ಸಮರ್ಥವಾಗಿ ನಿರ್ವಹಿಸುತ್ತಿದೆ,” ಎಂದು ಅವರು ಅಭಿನಂದಿಸಿದರು.
‘‘ನಾವು ಕೂಡಾ ಕುಂಭಮೇಳಕ್ಕೆ ತೆರಳಿದ್ದೆವು. ಸುಗಮವಾಗಿ ತೀರ್ಥಸ್ನಾನ ಮಾಡಿದೆವು. ಕಾಲ್ತುಳಿತದ ಘಟನೆ ನಡೆದಿರುವುದೇನೂ ನಿಜ. ಆದರೆ ಅದು ದೊಡ್ಡದೇನೂ ಅಲ್ಲ. ಅದನ್ನು (ಸಾವುನೋವಿನ ಸಂಖ್ಯೆ) ಉತ್ಪ್ರೇಕ್ಷಿಸಲಾಗಿದೆ. ಇಷ್ಟೊಂದು ದೊಡ್ಡ ಸಂಖ್ಯೆಯ ಜನರನ್ನು ನಿರ್ವಹಿಸುವುದು ಕಷ್ಟಕರವಾಗಿದ್ದರೂ, ಅದನ್ನು ದಕ್ಷತೆಯಿಂದ ಮಾಡಲಾಗಿದೆ ಎಂದು ಹೇಮಾಮಾಲಿನಿ ಶ್ಲಾಘಿಸಿದ್ದಾರೆ.