×
Ad

ಮಹುವಾ ಕ್ಷೇತ್ರದಲ್ಲಿ ತೇಜ್ ಪ್ರತಾಪ್ ಗೆ ಹಿನ್ನಡೆ; ಹೊಸ ಪಕ್ಷ ಜೆಜೆಡಿಗೆ ಮುಖಭಂಗ

Update: 2025-11-14 11:03 IST

ತೇಜ್ ಪ್ರತಾಪ್ ಯಾದವ್ (Photo: PTI)

ಪಟ್ನಾ: ವೈಶಾಲಿ ಜಿಲ್ಲೆಯ ಮಹುವಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರ ಪುತ್ರ ತೇಜ್ ಪ್ರತಾಪ್ ಯಾದವ್ ತೀವ್ರ ಹಿನ್ನಡೆ ಎದುರಿಸಿದ್ದಾರೆ. ಕಳೆದ ಬಾರಿ ಇದೇ ಕ್ಷೇತ್ರವನ್ನು ಆರ್‌ಜೆಡಿ ಟಿಕೆಟ್‌ನಲ್ಲಿ ಗೆದ್ದಿದ್ದ ಅವರು, ಕುಟುಂಬ-ಪಕ್ಷ ಎರಡರಿಂದಲೂ ದೂರವಾಗಿರುವ ಹಿನ್ನೆಲೆ ಈ ಬಾರಿ ತಮ್ಮ ಹೊಸ ರಾಜಕೀಯ ವೇದಿಕೆ ಜನಶಕ್ತಿ ಜನತಾದಳ (ಜೆಜೆಡಿ)ದಿಂದ ಚುನಾವಣಾ ಅಖಾಡಕ್ಕೆ ಇಳಿದಿದ್ದರು.

ಆದರೆ ಆರಂಭಿಕ ಮತ ಎಣಿಕೆಯ ಟ್ರೆಂಡ್‌ ಗಳು ತೇಜ್ ಪ್ರತಾಪ್ ಮುನ್ನಡೆ ಸಾಧಿಸುವಲ್ಲಿ ವಿಫಲರಾಗಿರುವುದನ್ನು ಸ್ಪಷ್ಟವಾಗಿ ತೋರಿಸಿವೆ. ನಾಲ್ಕನೇ ಸ್ಥಾನದಲ್ಲಿರುವ ಅವರು, ಮತದಾರರನ್ನು ಮರಳಿ ಸೆಳೆಯುವಲ್ಲಿ ಜೆಜೆಡಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ತೋರಿಸಿದೆ.

ರಾಜಕೀಯವಾಗಿ ಪ್ರಭಾವಿ ಯಾದವ್ ಮನೆತನದ ಸದಸ್ಯರಾಗಿದ್ದರೂ, ತೇಜ್ ಪ್ರತಾಪ್‌ರ ಈ ಹಿನ್ನಡೆ ಬಿಹಾರದ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಮಹುವಾದಲ್ಲಿ ಎನ್‌ಡಿಎ ಮತ್ತು ಆರ್‌ಜೆಡಿ ನಡುವೆ ನೇರ ಹಣಾಹಣಿ ಕಂಡುಬರುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News