×
Ad

ಭಾರತದ ಶುಭಾಂಶು ಶುಕ್ಲಾ ಅವರನ್ನು ಹೊತ್ಯೊಯ್ಯಲಿರುವ ಬಾಹ್ಯಾಕಾಶ ನೌಕೆ ಆ್ಯಕ್ಸಿಯೋಮ್-4 ಉಡಾವಣೆ ಮುಂದೂಡಿಕೆ

Update: 2025-06-09 22:36 IST

PC : X \ @airnewsalerts

ಹೊಸದಿಲ್ಲಿ: ಬಾಹ್ಯಾಕಾಶ ನೌಕೆ ಆ್ಯಕ್ಸಿಯೋಮ್-4 (ಎಎಕ್ಸ್-4) ಉಡಾವಣೆಯನ್ನು ಜೂನ್ 10ರಿಂದ ಜೂನ್ 11ಕ್ಕೆ ಮುಂದೂಡಲಾಗಿದೆ ಎಂದು ಇಸ್ರೋ ಸೋಮವಾರ ಪ್ರಕಟಿಸಿದೆ.

ಈ ಬಾಹ್ಯಾಕಾಶ ನೌಕೆ ಭಾರತೀಯ ಬಾಹ್ಯಾಕಾಶ ಯಾನಿಗಳ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರನ್ನು ಅಂತರ ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್‌ಎಸ್)ಕ್ಕೆ ಕರೆದೊಯ್ಯಲಿದೆ ಎಂದು ಅದು ತಿಳಿಸಿದೆ.

ಉಡಾವಣಾ ಪ್ರದೇಶದಲ್ಲಿ ಪ್ರತಿಕೂಲ ಹವಾಮಾನ ಪರಿಸ್ಥಿತಿಯ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ

ಈ ಬಾಹ್ಯಾಕಾಶ ನೌಕೆ ಈಗ ಜೂನ್ 11ರಂದು ಸಂಜೆ ಸುಮಾರು 5.30ಕ್ಕೆ ಉಡಾವಣೆಗೊಳ್ಳಲಿದೆ ಎಂದು ಇಸ್ರೋ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News