×
Ad

ಇಂದೋರ್ ದುರಂತ| ಶೌಚಾಲಯದ ಕೆಳಗೆ ನೀರಿನ ಪೈಪ್‌ಲೈನ್‌ ಸೋರಿಕೆಯಾಗಿ ನೀರು ಕಲುಷಿತಗೊಂಡಿದೆ: ವರದಿ

Update: 2026-01-02 12:56 IST

Photo credit: PTI

ಇಂದೋರ್: ಅಧಿಕೃತ ಪ್ರಯೋಗಾಲಯ ಪರೀಕ್ಷೆಯಲ್ಲಿ ಇಂದೋರ್‌ನ ಭಗೀರಥಪುರದಲ್ಲಿ ಜನರಲ್ಲಿ ಅತಿಸಾರ ಕಂಡು ಬಂದಿರುವುದಕ್ಕೆ ಕಲುಷಿತ ನೀರು ಕುಡಿದಿರುವುದೇ ಕಾರಣ ಎಂದು ದೃಢಪಟ್ಟಿದೆ.

ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು ಕನಿಷ್ಠ ನಾಲ್ವರು ಮೃತಪಟ್ಟು, 1,400ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದರು. ಕಳೆದ ಎಂಟು ವರ್ಷಗಳಿಂದ ಭಾರತದ ಅತ್ಯಂತ ಸ್ವಚ್ಛ ನಗರವೆಂದು ಸ್ಥಾನ ಪಡೆದಿರುವ ಮಧ್ಯಪ್ರದೇಶದ ಇಂದೋರ್ ನಗರದ ಕೆಲವು ಭಾಗಗಳಲ್ಲಿ ಸರಬರಾಜಾಗುತ್ತಿರುವ ಕುಡಿಯುವ ನೀರು ಜೀವಕ್ಕೆ ಅಪಾಯಕಾರಿಯಾಗಿದೆ ಎಂದು ಸಂಶೋಧನೆಗಳು ದೃಢಪಡಿಸಿವೆ.

ಭಗೀರಥಪುರ ಪೊಲೀಸ್ ಹೊರಠಾಣೆ ಬಳಿ ಕುಡಿಯುವ ನೀರಿನ ಮುಖ್ಯ ಸರಬರಾಜು ಪೈಪ್‌ಲೈನ್‌ನಲ್ಲಿ ಸೋರಿಕೆ ಕಂಡುಬಂದಿದೆ. ಕುಡಿಯುವ ನೀರಿನ ಪೈಪ್‌ಲೈನ್‌ಗೆ ಶೌಚಾಲಯದ ತ್ಯಾಜ್ಯ ನೀರು ಮಿಶ್ರಣವಾಗಿದೆ. ಪೈಪ್‌ ಲೈನ್‌ನಲ್ಲಿ ಸೋರಿಕೆಯಿಂದಾಗಿ ಆ ಪ್ರದೇಶದಲ್ಲಿ ನೀರು ಸರಬರಾಜು ಕಲುಷಿತಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಂದೋರ್‌ನ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯಾಧಿಕಾರಿ ಡಾ.ಮಾಧವ್ ಪ್ರಸಾದ್ ಹಸಾನಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಪ್ರಯೋಗಾಲಯದ ವರದಿಯು ಭಾಗೀರಥಪುರ ಪ್ರದೇಶದಲ್ಲಿ ಪೈಪ್‌ಲೈನ್‌ನಲ್ಲಿ ಸೋರಿಕೆಯಿಂದಾಗಿ ಕುಡಿಯುವ ನೀರು ಕಲುಷಿತವಾಗಿದೆ ಎಂದು ದೃಢಪಡಿಸಿದೆ ಎಂದು ಹೇಳಿದರು.

"ಬೇರೆಡೆ ಏನಾದರೂ ಸೋರಿಕೆಯಾಗಿದೆಯೇ ಎಂದು ಕಂಡುಹಿಡಿಯಲು ನಾವು ಭಾಗೀರಥಪುರದಲ್ಲಿ ಕುಡಿಯುವ ನೀರು ಸರಬರಾಜು ಪೈಪ್‌ಲೈನ್ ಅನ್ನು ಸಂಪೂರ್ಣವಾಗಿ ಪರಿಶೀಲಿಸುತ್ತಿದ್ದೇವೆ. ನಾವು ಈ ನೀರಿನ ಮಾದರಿಗಳನ್ನು ಸಹ ತೆಗೆದುಕೊಂಡು ಪರೀಕ್ಷೆಗೆ ಕಳುಹಿಸಿದ್ದೇವೆ" ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಂಜಯ್ ದುಬೆ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News