×
Ad

ವಯನಾಡ್ ಭೂಕುಸಿತ ಸಂತ್ರಸ್ತರಿಗೆ ಫೆಬ್ರವರಿಯಲ್ಲಿ 300 ಮನೆಗಳ ಹಸ್ತಾಂತರ: ಸಿಎಂ ಪಿಣರಾಯಿ ವಿಜಯನ್

Update: 2026-01-01 22:37 IST

 ಪಿಣರಾಯಿ ವಿಜಯನ್ | Photo Credit ; PTI 

ತಿರುವನಂತಪುರಂ: ವಯನಾಡ್ ಭೂಕುಸಿತ ಸಂತ್ರಸ್ತರಿಗೆ ಮೊದಲ ಹಂತದ ಪುನರ್ವಸತಿ ಯೋಜನೆಯ ಭಾಗವಾಗಿ ಫೆಬ್ರವರಿಯ ವೇಳೆಗೆ ಎಲ್ಲ ಸಂಬಂಧಿತ ಸೌಲಭ್ಯಗಳೊಂದಿಗೆ ಸುಮಾರು 300 ಮನೆಗಳ ನಿರ್ಮಾಣವನ್ನು ಪೂರ್ಣಗೊಳಿಸಿ ಹಸ್ತಾಂತರಿಸುವ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದೆ ಎಂದು ಗುರುವಾರ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಕಟಿಸಿದ್ದಾರೆ.

ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪಿಣರಾಯಿ ವಿಜಯನ್, “ಸುಮಾರು 300 ಮನೆಗಳನ್ನು ಸಂಬಂಧಿತ ಸೌಲಭ್ಯಗಳೊಂದಿಗೆ ಪೂರ್ಣಗೊಳಿಸಿ ಫೆಬ್ರವರಿಯ ಮೊದಲ ಹಂತದಲ್ಲಿ ಫಲಾನುಭವಿಗಳಿಗೆ ಹಸ್ತಾಂತರಿಸುವ ಗುರಿಯನ್ನು ಹೊಂದಿದ್ದೇವೆ” ಎಂದು ತಿಳಿಸಿದ್ದಾರೆ.

ಈ ಮನೆಗಳು ವಯನಾಡ್‌ನ ಮುಂಡಕ್ಕೈ–ಚೂರಲ್ಮಲದಲ್ಲಿ ಸಂಭವಿಸಿದ ಭೂಕುಸಿತದ ಸಂತ್ರಸ್ತ ಕುಟುಂಬಗಳಿಗೆ, ಕೆಲ್ಪಟ್ಟಾ ಬೈಪಾಸ್ ಬಳಿ ಇರುವ ಎಲ್ಸ್ಟೋನ್ ಎಸ್ಟೇಟ್ ಜಮೀನಿನಲ್ಲಿ ನಿರ್ಮಾಣವಾಗುತ್ತಿರುವ ಬೃಹತ್ ಟೌನ್‌ಶಿಪ್‌ ನ ಭಾಗವಾಗಿವೆ ಎಂದು ಅವರು ಹೇಳಿದ್ದಾರೆ.

ಈ ಯೋಜನೆ ಕ್ಷಿಪ್ರಗತಿಯಲ್ಲಿ ನಡೆಯುತ್ತಿದ್ದು, ಮನೆಗಳ ಸುರಕ್ಷತೆ, ಗುಣಮಟ್ಟ ಹಾಗೂ ದೀರ್ಘಾವಧಿಯ ಬಾಳಿಕೆ ಕುರಿತು ಗಮನ ಹರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಟೌನ್‌ಶಿಪ್ 410 ಮನೆಗಳನ್ನು ಒಳಗೊಂಡಿದ್ದು, ಘನತೆಯ ಬದುಕಿಗೆ ಬೇಕಾದ ಎಲ್ಲ ಅಗತ್ಯ ಸೌಲಭ್ಯಗಳನ್ನೂ ಒಳಗೊಂಡಿರಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News