×
Ad

ಮತ್ತೆ ಏರುಹಾದಿಯಲ್ಲಿ ಚಿನ್ನ; ಇಂದಿನ ದರವೆಷ್ಟು?

Update: 2026-01-02 11:55 IST

ಸಾಂದರ್ಭಿಕ ಚಿತ್ರ (AI)

ಭಾರತದಲ್ಲಿ ಚಿನ್ನದ ದರಗಳು ಮುಖ್ಯವಾಗಿ ಅಂತಾರಾಷ್ಟ್ರೀಯ ಸ್ಪಾಟ್ ಗೋಲ್ಡ್ ದರಗಳು, ಅಮೆರಿಕದ ಡಾಲರ್ ಏರಿಳಿತಗಳು ಮತ್ತು ಚಿನ್ನದ ಮೇಲಿನ ಆಮದು ಸುಂಕ ಮೊದಲಾದ ಕಾರಣಗಳಿಂದ ಏರಿಳಿತವಾಗುತ್ತಿವೆ.

ಜನವರಿಯಲ್ಲಿ ಚಿನ್ನದ ಬೆಲೆ ಕುಸಿಯುತ್ತದೆ ಎನ್ನುವ ನಿರೀಕ್ಷೆ ಹುಸಿಯಾಗಿದೆ. ಕಳೆದ ವರ್ಷದ ಅಂತ್ಯದಲ್ಲಿ ಇಳಿಕೆ ಕಂಡಿದ್ದ ಬೆಲೆ ಜನವರಿ ಮೊದಲ ದಿನದಿಂದಲೇ ಏರು ಹಾದಿಯಲ್ಲಿದೆ. ಅಂತಾರಾಷ್ಟ್ರಿಯ ಮಾರುಕಟ್ಟೆಯ ಪ್ರಭಾವದಿಂದ ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಏರಿಕೆಯಾಗುವ ಸಾಧ್ಯತೆಯಿದೆ. ಮುಂದಿನ ಕೇಂದ್ರದ ಬಜೆಟ್ ಮಂಡನೆಗೆ ಮೊದಲು ದೇಶದಲ್ಲಿ ಚಿನ್ನ ರಾಕೆಟ್ ವೇಗದಲ್ಲಿ ಏರುವ ಸಾಧ್ಯತೆಯಿದೆ ಎಂದು ತಜ್ಞರು ಹೇಳುತ್ತಿದ್ದಾರೆ.

ಇಂದು ಚಿನ್ನದ ಬೆಲೆಯೇರಲು ಕಾರಣವೇನು?

ಭಾರತದಲ್ಲಿ ಚಿನ್ನದ ದರಗಳು ಮುಖ್ಯವಾಗಿ ಅಂತಾರಾಷ್ಟ್ರೀಯ ಸ್ಪಾಟ್ ಗೋಲ್ಡ್ ದರಗಳು, ಅಮೆರಿಕದ ಡಾಲರ್ ಏರಿಳಿತಗಳು ಮತ್ತು ಚಿನ್ನದ ಮೇಲಿನ ಆಮದು ಸುಂಕ ಮೊದಲಾದ ಕಾರಣಗಳಿಂದ ಏರಿಳಿತವಾಗುತ್ತಿವೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇರಿದ ಶೇ 50ರಷ್ಟು ಸುಂಕವೂ ಚಿನ್ನದ ದರ ಏರಿಳಿತಕ್ಕೆ ಮುಖ್ಯ ಕಾರಣವಾಗಿದೆ. ಅಮೆರಿಕದ ಮತ್ತು ವೆನೆಜುವೆಲಾ ನಡುವಿನ ಭೌಗೋಳಿಕ ರಾಜಕೀಯ ಸಂಘರ್ಷಗಳು, ರಷ್ಯಾ-ಉಕ್ರೇನ್ ಯುದ್ಧದ ಅನಿಶ್ಚಿತತೆ ಹೆಚ್ಚಾಗಿರುವುದು ಮತ್ತೊಂದು ಕಾರಣವಾಗಿದೆ.

ಮುಂದುವರಿದು ಹಣದುಬ್ಬರ ತಗ್ಗಿದರೆ ಅಮೆರಿಕದ ಕೇಂದ್ರೀಯ ಬ್ಯಾಂಕ್ ಹಣಕಾಸು ನೀತಿಯನ್ನು ಸಡಿಲಿಸಬಹುದು ಎಂದು ಅಮೆರಿಕದ ಫೆಡರಲ್ ಓಪನ್ ಮಾರ್ಕೆಟ್ ಸಮಿತಿ ಸಭೆ ಬಿಡುಗಡೆ ಮಾಡಿದ ವಿವರಗಳೂ ಚಿನ್ನದ ಬೆಲೆಯ ಮೇಲೆ ಪರಿಣಾಮ ಬೀರಿದೆ. ಸಭೆಯ ವಿವರಗಳು 2026ರಲ್ಲಿ ದರ ಕಡಿತದ ಸೂಚನೆಯನ್ನು ನೀಡಿವೆ.

ಚಿನ್ನದ ದರಗಳು

ದೇಶದಲ್ಲಿ 24 ಕ್ಯಾರೆಟ್ ಚಿನ್ನದ ಪ್ರತಿ ಗ್ರಾಂಗೆ 13,620 ರೂ. ಗೆ ಏರಿದೆ. ಗುರುವಾರಕ್ಕೆ ಹೋಲಿಸಿದರೆ ಶುಕ್ರವಾರದ ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ 114 ರೂ.ಗಳಷ್ಟು ಬೆಲೆ ಏರಿಕೆಯಾಗಿದೆ. 22 ಕ್ಯಾರೆಟ್ ನ ಪ್ರತಿ ಗ್ರಾಂ ಚಿನ್ನದ ಬೆಲೆ ಹಿಂದಿನ ದಿನಕ್ಕೆ ಹೋಲಿಸಿದರೆ 105 ರೂ. ರಷ್ಟು ಏರಿಕೆಯಾಗಿ 12,485 ರೂ. ಗೆ ಏರಿದೆ. 18 ಕ್ಯಾರೆಟ್ನ ಪ್ರತಿ ಗ್ರಾಂ ಚಿನ್ನದ ಬೆಲೆ ಹಿಂದಿನ ದಿನಕ್ಕೆ ಹೋಲಿಸಿದರೆ 86 ರೂ. ಏರಿಕೆಯಾಗಿ 10,215 ರೂ. ಗೆ ಏರಿದೆ.

ಮಂಗಳೂರಿನಲ್ಲಿ ಇಂದು ಚಿನ್ನದ ದರವೆಷ್ಟು

ಶುಕ್ರವಾರ ಜನವರಿ 2ರಂದು ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಏರಿಕೆಯಾಗಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನಕ್ಕೆ 13,620 (+114) ರೂ., ಒಂದು ಗ್ರಾಂ 22 ಕ್ಯಾರೆಟ್ ಚಿನ್ನಕ್ಕೆ 12,485 (+105) ರೂ., ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನ 10,215 (+86) ರೂ. ಬೆಲೆಗೆ ತಲುಪಿದೆ.

ಬೆಂಗಳೂರಿನಲ್ಲಿ ಚಿನ್ನದ ವಹಿವಾಟು

ಬೆಳಗಿನ 7 ಗಂಟೆಯ ವಹಿವಾಟಿನಲ್ಲಿ ಬೆಂಗಳೂರಿನಲ್ಲಿ 24 ಕ್ಯಾರಟ್ ನ 10 ಗ್ರಾಂ ಚಿನ್ನದ ಬೆಲೆ 1,35,070 ರೂ. ಆಗಿತ್ತು. 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ 1,23,810 ರೂ. ಮತ್ತು ಬೆಳ್ಳಿಯ ಬೆಲೆ 1 ಕೆಜಿ: 2,57,900 ರೂ. ಗೆ ಏರಿಕೆಯಾಗಿದೆ.

ವಿವಿಧ ನಗರಗಳಲ್ಲಿ ಒಂದು ಗ್ರಾಂ 22 ಕ್ಯಾರಟ್ ಆಭರಣ ಚಿನ್ನದ ಬೆಲೆ ಹೀಗಿದೆ:

ಚೆನ್ನೈನಲ್ಲಿ 12,439 ರೂ.

ಮುಂಬೈ 12,381 ರೂ.

ದಿಲ್ಲಿ 12,396 ರೂ.

ಕೋಲ್ಕತ್ತಾ 12,381 ರೂ.

ಹೈದರಾಬಾದ್ 12,381 ರೂ.

ಕೇರಳ 12,381 ರೂ.

ಪುಣೆ 12,381 ರೂ.

ವಡೋದರಾ 12,386 ರೂ.

ಅಹಮದಾಬಾದ್ 12,386 ರೂ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News