ಮೇಘಾಲಯದಲ್ಲಿ ಲಘು ಭೂಕಂಪನ ;ಗುಜರಾತ್,ಕರ್ನಾಟಕದಲ್ಲೂ ನಡುಗಿದ ಭೂಮಿ
ಸಾಂದರ್ಭಿಕ ಚಿತ್ರ (PTI)
ಶಿಲ್ಲಾಂಗ್: ಮೇಘಾಲಯದ ರಾಜಧಾನಿ ಶಿಲ್ಲಾಂಗ್ ಮತ್ತು ಆಸುಪಾಸಿನ ಪ್ರದೇಶಗಳಲ್ಲಿ ಶುಕ್ರವಾರ ಬೆಳಿಗ್ಗೆ ರಿಕ್ಟರ್ ಮಾಪಕದಲ್ಲಿ 3.8 ತೀವ್ರತೆಯ ಭೂಕಂಪನ ಸಂಭವಿಸಿದ್ದು,ಯಾವುದೇ ಜೀವಹಾನಿ ಅಥವಾ ಆಸ್ತಿಹಾನಿ ತಕ್ಷಣಕ್ಕೆ ವರದಿಯಾಗಿಲ್ಲ ಎಂದು ಇಲ್ಲಿಯ ಪ್ರಾದೇಶಿಕ ಭೂಕಂಪಶಾಸ್ತ್ರ ಕೇಂದ್ರ (ಎನ್ಸಿಎಸ್)ದ ಅಧಿಕಾರಿಗಳು ತಿಳಿಸಿದರು.
ಬೆಳಿಗ್ಗೆ 8:46 ಗಂಟೆಗೆ ಸಂಭವಿಸಿದ್ದ ಭೂಕಂಪನದ ಕೇಂದ್ರಬಿಂದು ನಗರದ ನೈರುತ್ಯದ ಮಾವ್ಪ್ಲಂಗ್ ಪ್ರದೇಶದಲ್ಲಿ 14 ಕಿ.ಮೀ.ಆಳದಲ್ಲಿತ್ತು. ಈಶಾನ್ಯ ರಾಜ್ಯಗಳು ಅತ್ಯಂತ ಹೆಚ್ಚಿನ ಭೂಕಂಪನ ವಲಯದಲ್ಲಿದ್ದು, ಇಲ್ಲಿ ಆಗಾಗ್ಗೆ ಭೂಕಂಪನಗಳು ಸಂಭವಿಸುತ್ತಲೇ ಇರುತ್ತವೆ.
ಶುಕ್ರವಾರ ಬೆಳಿಗ್ಗೆ ಒಂಭತ್ತು ಗಂಟೆಗೆ ಗುಜರಾತಿನ ರಾಜಕೋಟ್ ಜಿಲ್ಲೆಯಲ್ಲಿಯೂ 3.9 ತೀವ್ರತೆಯ ಭೂಕಂಪನ ಸಂಭವಿಸಿದೆ. ಭೂಕಂಪನದ ಕೇಂದ್ರಬಿಂದು ರಾಜಕೋಟ್ನ ಉತ್ತರ ವಾಯುವ್ಯಕ್ಕೆ 133 ಕಿ.ಮೀ.ಅಂತರದಲ್ಲಿ 20 ಕಿ.ಮೀ. ಆಳದಲ್ಲಿತ್ತು ಎಂದು ಎನ್ಸಿಎಸ್ ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದೆ.
ಕರ್ನಾಟಕ,ತಮಿಳುನಾಡಿನಲ್ಲಿ ನಡುಗಿದ ಭೂಮಿ
ಶುಕ್ರವಾರ ಬೆಳಿಗ್ಗೆ ಕರ್ನಾಟಕದ ವಿಜಯಪುರ ಜಿಲ್ಲೆ ಯಲ್ಲಿ 3.1 ತೀವ್ರತೆಯ ಭೂಕಂಪನ ಸಂಭವಿಸಿದ್ದರೆ ಅತ್ತ ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯಲ್ಲಿಯೂ 3.2 ತೀವ್ರತೆಯ ಭೂಕಂಪನ ಸಂಭವಿಸಿದೆ ಎಂದು ಎನ್ಸಿಎಸ್ ತಿಳಿಸಿದೆ.