"ಮತದಾನದ ದಿನದಂದು ಅವರನ್ನು ಹೊರಗೆ ಹೋಗಲು ಬಿಡಬೇಡಿ" : ವಿರೋಧ ಪಕ್ಷದ ನಾಯಕರನ್ನುದ್ದೇಶಿಸಿ ವಿವಾದಾತ್ಮಕ ಹೇಳಿಕೆ ನೀಡಿದ ಕೇಂದ್ರ ಸಚಿವ
ಪ್ರಕರಣ ದಾಖಲು
Screengrab:X/@TARUNspeakss
ಪಾಟ್ನಾ : ವಿರೋಧ ಪಕ್ಷದ ನಾಯಕರನ್ನು ಕೂಡಿ ಹಾಕುವಂತೆ ಕಾರ್ಯಕರ್ತರಿಗೆ ಹೇಳುವ ಮೂಲಕ ವಿವಾದಕ್ಕೆ ಕಾರಣವಾದ ಕೇಂದ್ರ ಸಚಿವ ಲಾಲನ್ ಸಿಂಗ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ವೈರಲ್ ವೀಡಿಯೊದಲ್ಲಿ, "ಮಗಾಹಿಯಲ್ಲಿ ಕೆಲವು ಜನರಿದ್ದಾರೆ. ಅವರನ್ನು ಮತದಾನದ ದಿನದಂದು ಹೊರಗೆ ಹೋಗಲು ಬಿಡಬಾರದು. ಅವರನ್ನು ಅವರ ಮನೆಯೊಳಗೆ ಕೂಡಿ ಹಾಕಬೇಕು. ಅವರು ನಿಮ್ಮ ಮನವೊಲಿಸಿದರೆ ಮತಗಟ್ಟೆಗಳಿಗೆ ಹೋಗಿ ಮತ ಚಲಾಯಿಸಿದ ನಂತರ ಅವರು ಮನೆಗೆ ಹೋಗುವುದನ್ನು ಖಚಿತಪಡಿಸಿಕೊಳ್ಳಿ" ಎಂದು ಹೇಳುವುದು ಕೇಳಿಸಿದೆ.
ಲಾಲನ್ ಅವರ ಹೇಳಿಕೆಯ ವೀಡಿಯೊದ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಸಾಧ್ಯವಾಗಿಲ್ಲ ಎಂದು ಪಿಟಿಐ ಹೇಳಿದೆ. ಆದರೆ ಈ ಕುರಿತ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.
"Those who are not going to vote for BJP, don't let them step out of home"
— Tarun Gautam (@TARUNspeakss) November 4, 2025
These are the words of cabinet minister Lalan Singh (JDU).
Imagine if these were the words of Lalu Yadav or his party, it would have been declared JungleRaj by now.pic.twitter.com/5hFgdFkyqb