ಲೋಕಸಭಾ ಚುನಾವಣೆ | ವಯನಾಡ್ ತೊರೆಯಲಿರುವ ರಾಹುಲ್ ಗಾಂಧಿ?
Update: 2024-02-26 22:15 IST
ರಾಹುಲ್ ಗಾಂಧಿ | Photo; X
ಹೊಸದಿಲ್ಲಿ : ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೇರಳದ ವಯನಾಡ್ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಇಲ್ಲ ಎಂದು ಮೂಲಗಳು ತಿಳಿಸಿವೆ.
ರಾಹುಲ್ ಗಾಂಧಿ ಅವರು ಕರ್ನಾಟಕ ಅಥವಾ ತೆಲಂಗಾಣದ ಒಂದು ಕ್ಷೇತ್ರದಲ್ಲಿ ಹಾಗೂ ಉತ್ತರಪ್ರದೇಶದ ಒಂದು ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಅವು ತಿಳಿಸಿವೆ. ಕೇರಳದಲ್ಲಿ ಸ್ಥಾನ ಹಂಚಿಕೆಯ ಮಾತುಕತೆಯ ನಡುವೆ ಈ ಬೆಳವಣಿಗೆ ನಡೆದಿದೆ.
ಈ ಬಾರಿ 2ರ ಬದಲು 3 ಕ್ಷೇತ್ರಗಳನ್ನು ನೀಡುವಂತೆ ಐಯುಎಂಎಲ್ ಒತ್ತಡ ಹೇರುತ್ತಿದೆ. ಐಯುಎಂಎಲ್ ವಯನಾಡ್ ನಿಂದ ಸ್ಪರ್ಧಿಸಲು ಬಯಸುತ್ತಿದೆ. ಅದರ ಹೆಚ್ಚಿನ ಮತದಾರರು ಮುಸ್ಲಿಂ ಸಮುದಾಯಕ್ಕೆ ಸೇರಿದವರಿರುವುದರಿಂದ ಆ ಕ್ಷೇತ್ರದ ಮೇಲೆ ಕಣ್ಣಿಟ್ಟಿದೆ ಎನ್ನಲಾಗಿದೆ.
ಇದಲ್ಲದೆ, ಸಿಪಿಐ ತನ್ನ ಪಕ್ಷದ ಪ್ರಧಾನ ಕಾರ್ಯದರ್ಶಿ ಡಿ. ರಾಜಾ ಅವರ ಪತ್ನಿಯನ್ನು ವಯನಾಡ್ ಕ್ಷೇತ್ರದಲ್ಲಿ ಕಣಕ್ಕಿಳಿಸಲಿದೆ ಎಂದು ತಿಳಿದು ಬಂದಿದೆ.