×
Ad

ಲೋಕಸಭಾ ಚುನಾವಣಾ ಫಲಿತಾಂಶ | ನಕಾರಾತ್ಮಕ ರಾಜಕಾರಣದ ಅಂತ್ಯ: ಅಖಿಲೇಶ್ ಯಾದವ್ ಅಭಿಮತ

Update: 2024-06-08 21:05 IST

ಅಖಿಲೇಶ್ ಯಾದವ್ | PC : PTI 

ಲಕ್ನೊ: ನಕಾರಾತ್ಮಕ ರಾಜಕಾರಣ ಅಂತ್ಯಗೊಂಡಿದ್ದು, ಜನರ ಸಮಸ್ಯೆಗಳು ಹಾಗೂ ಕಳವಳಗಳು ಗೆಲುವು ಸಾಧಿಸಿವೆ ಎಂದು ಶನಿವಾರ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದರು.

ಒಂದು ಕಡೆ ಇಂಡಿಯಾ ಮೈತ್ರಿಕೂಟ ಹಾಗೂ ಪಿಡಿಎ ಕಾರ್ಯತಂತ್ರಕ್ಕೆ ಗೆಲುವಾಗಿದ್ದರೆ, ಮತ್ತೊಂದು ಕಡೆ ಈ ಚುನಾವಣೆಯಲ್ಲಿ ಸಮಾಜವಾದಿ ಪಕ್ಷವು ಮೂರನೆಯ ಅತಿ ದೊಡ್ಡ ಪಕ್ಷವಾಗಿ ಉದ್ಭವಿಸಿದೆ. ನಮ್ಮ ಪಕ್ಷವು ಜನರ ಬೆಂಬಲವನ್ನು ದೊಡ್ಡ ಮಟ್ಟದಲ್ಲಿ ಪಡೆದಿದೆ ಎಂದು ಅವರು ಪ್ರತಿಪಾದಿಸಿದರು.

ಇದೇ ವೇಳೆ ಸಮಾಜವಾದಿ ಪಕ್ಷದ ಜವಾಬ್ದಾರಿ ಕೂಡಾ ಹೆಚ್ಚಿದ್ದು, ಅದು ಸಾರ್ವಜನಿಕರ ಸಮಸ್ಯೆಯಾಗಿರಲಿ, ಸಾರ್ವಜನಿಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಳ್ಳುವುದಾಗಲಿ ಹಾಗೂ ನಮ್ಮ ದೃಷ್ಟಿಕೋನಗಳನ್ನು ಮಂಡಿಸುವ ಸಮಯದಲ್ಲಾಗಲಿ ಆಗಿರಬಹುದು. ಲೋಕಸಭೆಯಲ್ಲಿ ಜನರಿಗೆ ಗರಿಷ್ಠ ಮಟ್ಟದಲ್ಲಿ ಸೇವೆ ಸಲ್ಲಿಸುವುದೇ ಸಮಾಜವಾದಿ ಪಕ್ಷದ ಗುರಿಯಾಗಿದೆ ಎಂದೂ ಅವರು ಹೇಳಿದರು.

ಇತ್ತೀಚೆಗಷ್ಟೆ ಮುಕ್ತಾಯಗೊಂಡ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ 80 ಸ್ಥಾನಗಳ ಪೈಕಿ 37 ಸ್ಥಾನಗಳಲ್ಲಿ ಸಮಾಜವಾದಿ ಪಕ್ಷ ಜಯ ಗಳಿಸಿದ್ದರೆ, ಅದರ ಮಿತ್ರ ಪಕ್ಷವಾದ ಕಾಂಗ್ರೆಸ್ 6 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News