×
Ad

ಲೋಕಸಭಾ ಚುನಾವಣೆ : ʼಇಂಡಿಯಾʼದ ನೂತನ ಸಮಿತಿಗಳಿಗೆ ಹೆಚ್ಚುವರಿ ನೇಮಕ

Update: 2023-09-03 22:47 IST

Photo: IANS

ಹೊಸದಿಲ್ಲಿ: ಪ್ರತಿಪಕ್ಷಗಳ ಮೈತ್ರಿಕೂಟ ‘ಇಂಡಿಯಾʼಶುಕ್ರವಾರ ತನ್ನ ಮುಂಬೈ ಸಭೆಯಲ್ಲಿ ರಚಿಸಿದ್ದ ಸಮಿತಿಗಳ ಪೈಕಿ ಕೆಲವಕ್ಕೆ ಹೆಚ್ಚುವರಿ ನೇಮಕಗಳನ್ನು ಮಾಡಿದೆ. ಮೈತ್ರಿಕೂಟವು 2024ರ ಲೋಕಸಭಾ ಚುನಾವಣೆಯಲ್ಲಿ ಹೋರಾಟಕ್ಕೆ ಸಜ್ಜಾಗಲು 14 ಸದಸ್ಯರ ಸಮನ್ವಯ ಸಮಿತಿಯೊಂದಿಗೆ ಪ್ರಚಾರ ಸಮಿತಿ, ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳಿಗಾಗಿ ಕಾರ್ಯಪಡೆಗಳನ್ನು ರಚಿಸಿತ್ತು.

ಈಗ ಡಿಎಂಕೆ ನಾಯಕಿ ಕನಿಮೋಳಿ ಮತ್ತು ಕಾಂಗ್ರೆಸ್ ನಾಯಕ ಪವನ ಖೇರಾ ಅವರನ್ನು ಮಾಧ್ಯಮಗಳಿಗೆ ಸಂಬಂಧಿಸಿದ ಹಾಗೂ ಡಿಎಂಕೆಯ ದಯಾನಿಧಿ ಮಾರನ್ ಮತ್ತು ಆರ್ಎಲ್ಡಿಯ ರೋಹಿತ ಜಾಖಡ್ ಅವರನ್ನು ಸಾಮಾಜಿಕ ಮಾಧ್ಯಮ ಕಾರ್ಯಪಡೆಗಳಲ್ಲಿ ಸೇರಿಸಲಾಗಿದೆ.

ಇದೇ ರೀತಿ ಡಿಎಂಕೆಯ ಎ.ರಾಜಾ ಅವರು ಸಂಶೋಧನೆ ಕುರಿತ ಕಾರ್ಯಪಡೆಗೆ ಹಾಗೂ ಡಿಎಂಕೆಯ ತಿರುಚ್ಚಿ ಶಿವಾ ಮತ್ತು ಪಿಡಿಪಿಯ ಮೆಹಬೂಬ ಬೇಗ್ ಅವರು 19 ಸದಸ್ಯರ ಪ್ರಚಾರ ಸಮಿತಿಗೆ ಸೇರ್ಪಡೆಗೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News