×
Ad

ಲೋಕಸಭಾ ಚುನಾವಣೆ: 16 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ

Update: 2024-03-27 11:27 IST

ಉದ್ಧವ್ ಠಾಕ್ರೆ | Photo: NDTV 

ಮುಂಬೈ: ಮುಂಬರುವ ಲೋಕಸಭಾ ಚುನಾವಣೆಗೆ ಶಿವಸೇನೆ(ಉದ್ಧವ್ ಬಣ)ಯು 16 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ಮಾಜಿ ಕೇಂದ್ರ ಸಚಿವರಾದ ಅನಂತ್ ಗೀತೆ ಹಾಗೂ ಅರವಿಂದ್ ಸಾವಂತ್ ಕ್ರಮವಾಗಿ ರಾಯಗಢ ಹಾಗೂ ದಕ್ಷಿಣ ಮುಂಬೈ ಲೋಕಸಭಾ ಕ್ಷೇತ್ರಗಳಿಂದ ಟಿಕೆಟ್ ಗಿಟ್ಟಿಸಿದ್ದಾರೆ.

ಹಾಗೆಯೇ, ಥಾಣೆಯಿಂದ ರಾಜನ್ ವಿಚಾರೆ, ವಾಯುವ್ಯ ಮುಂಬೈನಿಂದ ಅಮೋಲ್ ಕೀರ್ತಿಕಾರ್ ಹಾಗೂ ಈಶಾನ್ಯ ಮುಂಬೈನಿಂದ ಸಂಜಯ್ ಪಾಟೀಲ್ ಅವರನ್ನು ಪಕ್ಷವು ಕಣಕ್ಕಿಳಿಸಿದೆ.

ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯು ಮಹಾ ವಿಕಾಸ್ ಅಘಾಡಿ ಮೈತ್ರಿಕೂಟದ ಪಾಲುದಾರ ಪಕ್ಷವಾಗಿದೆ.

ಉತ್ತರ ಪ್ರದೇಶ(80)ದ ನಂತರ ಅತಿ ಹೆಚ್ಚು ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಮಹಾರಾಷ್ಟ್ರ(48)ದಲ್ಲಿ ಎಪ್ರಿಲ್ 19ರಿಂದ ಐದು ಹಂತದಲ್ಲಿ ಚುನಾವಣೆ ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News