×
Ad

ಮಧ್ಯ ಪ್ರದೇಶ: ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ನಮೀಬಿಯಾ ಚಿರತೆ ಸಾವು

Update: 2025-07-12 21:10 IST

PC : PTI 

ಭೋಪಾಲ: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ನಮೀಬಿಯಾದ 8 ವರ್ಷದ ಹೆಣ್ಣು ಚಿರತೆ ನಭಾ ಶನಿವಾರ ಸಾವನ್ನಪ್ಪಿದೆ.

ಉದ್ಯಾನವನದ ಆವರಣದ ಒಳಗೆ ಭೇಟೆಯಾಡಲು ಪ್ರಯತ್ನಿಸುತ್ತಿದ್ದಾಗ ಅದಕ್ಕೆ ಗಾಯಗಳಾಗಿರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಉದ್ಯಾನದ ವೈದ್ಯಕೀಯ ತಂಡ ಅದಕ್ಕೆ ಚಿಕಿತ್ಸೆ ನೀಡುತ್ತಿತ್ತು. ಆದರೆ, ಅವರ ಪ್ರಯತ್ನದ ಹೊರತಾಗಿಯೂ ಅದು ಸಾವನ್ನಪ್ಪಿತು. ಹೆಚ್ಚಿನ ವಿವರಗಳು ಮರಣೋತ್ತರ ಪರೀಕ್ಷೆಯ ಬಳಿಕ ಸಿಗಲಿದೆ ಎಂದು ಕುನೋ ರಾಷ್ಟ್ರೀಯ ಉದ್ಯಾನವನ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

2022 ಸೆಪ್ಟಂಬರ್ 17ರಂದು ಕುನೋ ರಾಷ್ಟ್ರೀಯ ಉದ್ಯಾನಕ್ಕೆ ತರಲಾಗಿದ್ದ 8 ನಮೀಬಿಯಾ ಚಿರತೆಗಳಲ್ಲಿ ಸವನ್ನಾ ಕೂಡ ಒಂದಾಗಿತ್ತು. ಸ್ಥಳಾಂತರಗೊಂಡ ಚೀತಾಗಳಿಗೆ ಭಾರತೀಯ ಹೆಸರನ್ನು ನೀಡುವುದನ್ನು ಉತ್ತೇಜಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಆಗ್ರಹಿಸಿದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಹೆಸರು ಸೂಚಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಆಯ್ಕೆಯಾದ ನಭಾ ಎಂಬ ಹೆಸರನ್ನು 2023 ಎಪ್ರಿಲ್‌ ನಲ್ಲಿ ಈ ಚಿರತೆಗೆ ಇರಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News