×
Ad

ಕೆಮ್ಮು ಸಿರಪ್ ಸೇವಿಸಿ ಮಕ್ಕಳು ಮೃತಪಟ್ಟ ಪ್ರಕರಣ : ಕಾಲ್ಡ್ರಿಫ್ ಸಿರಪ್ ಶಿಫಾರಸು ಮಾಡಿದ ವೈದ್ಯನ ಬಂಧನ

Update: 2025-10-05 13:35 IST

ಡಾ.ಪ್ರವೀಣ್ ಸೋನಿ (Photo: PTI)

ಭೋಪಾಲ್ : ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯಲ್ಲಿ ಕೆಮ್ಮು ಸಿರಪ್ ಸೇವಿಸಿದ ಬಳಿಕ 11 ಮಕ್ಕಳು ಮೃತಪಟ್ಟ ಹಿನ್ನೆಲೆ ಕಲುಷಿತ ಕೆಮ್ಮು ಸಿರಪ್ ಅನ್ನು ಶಿಫಾರಸು ಮಾಡಿದ ವೈದ್ಯನನ್ನು ಬಂಧಿಸಲಾಗಿದೆ.

ವರದಿಗಳ ಪ್ರಕಾರ, ವೈದ್ಯ ಡಾ.ಪ್ರವೀಣ್ ಸೋನಿ ಪರಾಸಿಯಾದಲ್ಲಿರುವ ತನ್ನ ಕ್ಲಿನಿಕ್ ನಲ್ಲಿ ಹಲವಾರು ಮಕ್ಕಳಿಗೆ ಕಾಲ್ಡ್ರಿಫ್ ಕೆಮ್ಮಿನ ಸಿರಪ್ ಅನ್ನು ಶಿಫಾರಸು ಮಾಡಿದ್ದಾರೆ ಎಂದು ಹೇಳಲಾಗಿದೆ.

ಶನಿವಾರ ಮಧ್ಯಪ್ರದೇಶ ಪೊಲೀಸರು ಡಾ. ಪ್ರವೀಣ್ ಸೋನಿ ಮತ್ತು ಕೆಮ್ಮು ಸಿರಪ್ ತಯಾರಿಸಿದ ತಮಿಳುನಾಡು ಮೂಲದ ಶ್ರೀಸಾನ್ ಫಾರ್ಮಾಸ್ಯುಟಿಕಲ್ಸ್ ಕಂಪೆನಿಯ ನಿರ್ವಾಹಕರ ವಿರುದ್ಧ ಎಫ್ಐಆರ್ ದಾಖಲಿಸಿದ್ದರು.

ಇದಲ್ಲದೆ ಮಧ್ಯಪ್ರದೇಶ ಸರಕಾರ ರವಿವಾರ ಕಾಲ್ಡ್ರಿಫ್ ಕೆಮ್ಮು ಸಿರಪ್ ಮಾರಾಟವನ್ನು ನಿಷೇಧಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News