×
Ad

ತೃತೀಯ ಲಿಂಗಿಗಳಿಗೆ ಮಕ್ಕಳನ್ನು ದತ್ತು ತೆಗೆದುಕೊಳ್ಳುವ ಅವಕಾಶ ಏಕೆ ನೀಡಬಾರದು?: ಕೇಂದ್ರವನ್ನು ಪ್ರಶ್ನಿಸಿದ ಮದ್ರಾಸ್ ಹೈಕೋರ್ಟ್

Update: 2025-11-10 19:49 IST

ಮದ್ರಾಸ್ ಹೈಕೋರ್ಟ್ | Photo Credit : PTI 

ಚೆನ್ನೈ: ತೃತೀಯ ಲಿಂಗಿಗಳು ಪೂರ್ಣಪ್ರಮಾಣದಲ್ಲಿ ಮತ್ತು ಪರಿಣಾಮಕಾರಿಯಾಗಿ ಭಾಗವಹಿಸುವಂತೆ ಹಾಗೂ ಸಮಾಜವು ಅವರನ್ನು ಒಳಗೊಳ್ಳುವಂತೆ ಮಾಡಬೇಕು ಎಂಬ ಶಾಸನಾತ್ಮಕ ಬಾಧ್ಯತೆ ಸರಕಾರದ ಮೇಲಿರುವಾಗ, ತೃತೀಯ ಲಿಂಗಿಗಳು ಮಕ್ಕಳನ್ನು ದತ್ತು ಪಡೆಯುವ ಅವಕಾಶ ಯಾಕೆ ನೀಡಬಾರದು ಎಂದು ವಿವರಿಸುವಂತೆ ಕೇಂದ್ರ ಸರಕಾರಕ್ಕೆ ಮದ್ರಾಸ್ ಹೈಕೋರ್ಟ್ ನಿರ್ದೇಶನ ನೀಡಿದೆ.

ಚೆನ್ನೈನ ಕೊಳತ್ತೂರ್ ನಿವಾಸಿ ಬಿ.ಶಮ ಎಂಬುವವರು ಹಿಂದೂ ದತ್ತು ಮತ್ತು ನಿರ್ವಹಣೆ ಕಾಯ್ದೆ, 1956ರ ಸೆಕ್ಷನ್ 7ರಡಿ ಕಂಡು ಬರುವ ‘ಮಹಿಳೆ’ ಎಂಬ ಪದ ಹಾಗೂ ದತ್ತು ಮಕ್ಕಳ ನಿಗಾವಣೆ ಕುರಿತು ಕೇಂದ್ರ ಸರಕಾರದ ಮಾರ್ಗಸೂಚಿಯಲ್ಲಿ ತೃತೀಯ ಲಿಂಗಿ ಮಹಿಳೆಯರನ್ನೂ ಮಹಿಳೆಯರೆಂದು ಘೋಷಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯ ಈ ನಿರ್ದೇಶನ ನೀಡಿತು.

ಈ ಕುರಿತು ಪ್ರಶ್ನೆ ಎತ್ತಿದ ನ್ಯಾ. ಮಣೀಂದ್ರ ಮೋಹನ್ ಶ್ರೀವಾಸ್ತವ ಮತ್ತು ನ್ಯಾ. ಜಿ. ಅರುಳ್ ಮುರುಗನ್ ಅವರನ್ನೊಳಗೊಂಡ ಪ್ರಥಮ ದರ್ಜೆಯ ವಿಭಾಗೀಯ ನ್ಯಾಯಪೀಠ, ಡಿಸೆಂಬರ್ 4, 2025ರೊಳಗೆ ಕೇಂದ್ರ ಮಹಿಳಾ ಮತ್ತು ಮಕ್ಕಳಾಭಿವೃದ್ಧಿ ಸಚಿವಾಲಯವು ಪ್ರತಿ ಪ್ರಮಾಣ ಸಲ್ಲಿಸುವುದನ್ನು ಖಾತರಿಗೊಳಿಸಬೇಕು ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಎ.ಆರ್.ಎಲ್.ಸುಂದರೇಶನ್ ಅವರಿಗೆ ಸೂಚಿಸಿತು.

ವಿಚಾರಣೆಯ ಸಂದರ್ಭದಲ್ಲಿ ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ, 2015ರ ಅಡಿ ದತ್ತು ಪಡೆಯಲು ವಿಸ್ತೃತ ನಿಯಮಗಳನ್ನು ರೂಪಿಸಲಾಗಿದ್ದು, ಭಾರತದಲ್ಲಿ ವಾಸಿಸುತ್ತಿರುವ ಪೋಷಕರು ಹಾಗೂ ಅಂತರ್ದೇಶ ದತ್ತು ಪಡೆಯುವಿಕೆಗೆ ಅರ್ಹತಾ ಮಾನದಂಡಗಳನ್ನು ನಿಗದಿಪಡಿಸಲಾಗಿದೆ ಎಂಬುದರತ್ತ ಮುಖ್ಯಿ ನ್ಯಾಯಮೂರ್ತಿಗಳು ಗಮನ ಸೆಳೆದರು.

ಶಾಸನಾತ್ಮಕ ನಿಯಮಗಳನುಸಾರ, ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯವು 2013ರಲ್ಲಿ ಕೇಂದ್ರ ಸರಕಾರ ಅನುಮೋದಿಸಿರುವ 1993ರ ಅಂತರ್ದೇಶ ದತ್ತು ಪಡೆಯುವಿಕೆ ಮೇಲಿನ ಹೇಗ್ ಸಮಾವೇಶದ ನಿರ್ಣಯಕ್ಕೆ ಒಳಪಟ್ಟು ಕೇಂದ್ರ ಸರಕಾರವು ದೇಶದೊಳಗೆ ಹಾಗೂ ಅಂತರ್ದೇಶ ದತ್ತು ಪಡೆಯುವಿಕೆಯ ಮೇಲೆ ನಿಗಾ ವಹಿಸುವ ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರ (CARA) ಎಂಬ ಹೆಸರಿನ ನೋಡಲ್ ಸಂಸ್ಥೆಯನ್ನು ಸ್ಥಾಪಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News