×
Ad

ಮಹಾಕುಂಭ ಮೇಳ | ಮೊದಲ ಕಾಲ್ತುಳಿತ ಸಂಭವಿಸಿದ ಸ್ಥಳದಿಂದ 2 ಕಿ.ಮೀ ದೂರದಲ್ಲಿ ಮತ್ತೊಂದು ಕಾಲ್ತುಳಿತ : ವರದಿ

Update: 2025-01-30 18:02 IST

Image: The Lallantop \ indiatoday.in

ಲಕ್ನೋ : ಪ್ರಯಾಗ್ ರಾಜ್ ಮಹಾ ಕುಂಭದಲ್ಲಿ ಸಂಗಮ್ ನೋಸ್ ಬಳಿ ಕಾಲ್ತುಳಿತ ಸಂಭವಿಸಿದ ಸ್ಥಳದಿಂದ 2 ಕಿ.ಮೀ ದೂರದಲ್ಲಿ ಎರಡನೇ ಕಾಲ್ತುಳಿತ ಸಂಭವಿಸಿದೆ. ಆದರೆ, ಅದು ಹೆಚ್ಚು ಸುದ್ದಿಯಾಗಿಲ್ಲ ಎಂದು indiatoday ವರದಿ ಮಾಡಿದೆ.

ಮೂಲಗಳ ಪ್ರಕಾರ, ಕುಂಭ ಮೇಳದಲ್ಲಿ ಕಾಲ್ತುಳಿತದಲ್ಲಿ 30 ಮಂದಿ ಭಕ್ತರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಇವುಗಳಲ್ಲಿ ಸಂಗಮ್ ನೋಸ್ ಮತ್ತು ಜುಸಿಯಲ್ಲಿ ಮೃತರು ಸೇರಿದ್ದಾರೆ ಎಂದು ವರದಿ ತಿಳಿಸಿದೆ.

Full View

ಕುಂಭಮೇಳ ಮೈದಾನದಲ್ಲಿ ಇನ್ನೂ ಕೋಟಿಗಟ್ಟಲೆ ಭಕ್ತರು ಸ್ನಾನ ಮಾಡಲಿರುವುದರಿಂದ ಮಹಾಕುಂಭದಲ್ಲಿ ಭಕ್ತರು ಭಯ ಪಡುವುದನ್ನು ತಡೆಯಲು ಎರಡನೇ ಕಾಲ್ತುಳಿತದ ಬಗ್ಗೆ ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಲಾಗಿಲ್ಲ ಎಂದು ಹೇಳಲಾಗಿದೆ.

ಅಭಿನವ್ ಪಾಂಡೆ ಮತ್ತು ಮೋಹನ್ ಕನೌಜಿಯಾ ಅವರು ಜುಸಿಯಲ್ಲಿ ಕಾಲ್ತುಳಿತದ ಸ್ಥಳದಿಂದ ವರದಿ ಮಾಡಿದ್ದಾರೆ. ವರದಿಯಲ್ಲಿ ಕಾಲ್ತುಳಿತದ ಸ್ಥಳದಿಂದ ಬಟ್ಟೆ, ಪಾದರಕ್ಷೆಗಳು ಮತ್ತು ಬಾಟಲಿಗಳ ರಾಶಿಯನ್ನು ಟ್ರ್ಯಾಕ್ಟರ್‌ ಗಳ ಮೂಲಕ ತೆರವುಗೊಳಿಸುವುದು ಕಂಡು ಬಂದಿದೆ. ಇದಲ್ಲದೆ ಸ್ಥಳದಿಂದ ಮೃತದೇಹಗಳನ್ನು ಕೂಡ ಹೊರತೆಗೆಯುವುದು ಕಂಡು ಬಂದಿದೆ ಎಂದು indiatoday ವರದಿ ಮಾಡಿದೆ.

ಜುಸಿ ಸಂಗಮ್ ನೋಸ್ ಬಳಿಯ ಮೊದಲ ಕಾಲ್ತುಳಿತದ ಸ್ಥಳದಿಂದ ಕೇವಲ 2 ಕಿ.ಮೀ. ದೂರದಲ್ಲಿದೆ. ಮೊದಲ ಕಾಲ್ತುಳಿತವು ಮಧ್ಯರಾತ್ರಿ 1.30ರ ಸುಮಾರಿಗೆ ಸಂಭವಿಸಿದರೆ, ಜುಸಿಯಲ್ಲಿ ಬೆಳಿಗ್ಗೆ 5.55ರ ಸುಮಾರಿಗೆ ಎರಡನೇ ಕಾಲ್ತುಳಿತ ಸಂಭವಿಸಿದೆ ಎಂದು ವರದಿಯು ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News