×
Ad

Fact Check | ಮಹಾ ಕುಂಭಮೇಳದಲ್ಲಿ ಕಾಲ್ತುಳಿತದ್ದು ಎಂದು ಹೇಳಲಾಗಿರುವ ವೀಡಿಯೊ ನಿಜವೇ?

Update: 2025-01-25 17:46 IST

PC : factly.in

ಹೊಸದಿಲ್ಲಿ: ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದ್ದು ಎಂದು ಬಿಂಬಿಸಲಾಗಿರುವ ಕಾಲ್ತುಳಿತದ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಾಲ್ತುಳಿತ ಗಂಗಾ ಘಾಟ್‌ನಲ್ಲಿ ನಡೆದಿದೆ ಎಂದು ಹೇಳಿಕೊಂಡು ಬಳಕೆದಾರರು ಈ ವೀಡಿಯೊವನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.

ಅಸಲಿಗೆ ಇದು ಆಗಸ್ಟ್ 2024ರ ಹಳೆಯ ವೀಡಿಯೊ ಆಗಿದ್ದು,ಬಿಹಾರದ ಭಾಗಲ್ಪುರದಲ್ಲಿ ಸಂಭವಿಸಿದ್ದ ಕಾಲ್ತುಳಿತದ್ದಾಗಿದೆ. ಇದು ಮಹಾ ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತದ್ದು ಎಂಬ ಹೇಳಿಕೆ ಅಪ್ಪಟ ಸುಳ್ಳು ಮತ್ತು ದಾರಿ ತಪ್ಪಿಸುವಂಥದ್ದಾಗಿದೆ.

PC :factly.in

 

ವೈರಲ್ ವೀಡಿಯೊದ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಸುದ್ದಿಸಂಸ್ಥೆಯು ಕೀವರ್ಡ್ ಸರ್ಚ್ ನಡೆಸಿದಾಗ ಈ ವೀಡಿಯೊದಲ್ಲಿ ಕಂಡು ಬಂದಿರುವ ಘಟನೆಯ ಕುರಿತು ವಿವಿಧ ಮಾಧ್ಯಮ ವರದಿಗಳು ಕಂಡು ಬಂದಿದ್ದು,ಈ ಎಲ್ಲ ವರದಿಗಳು ಆಗಸ್ಟ್ 2024ರದ್ದಾಗಿವೆ.

ಪತ್ರಕರ್ತ ಸುರೇಂದ್ರ ಸೈನಿ ಎನ್ನುವವರು 2024,ಸೆ.4ರಂದು ಇದೇ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು.

Full View

PC :factly.in

PC :factly.in

ವರದಿಗಳಂತೆ ಬಿಹಾರದ ಭಾಗಲ್ಪುರದಲ್ಲಿ ಶ್ರಾವಣದ ಸಂದರ್ಭದಲ್ಲಿ ಈ ಕಾಲ್ತುಳಿತ ಸಂಭವಿಸಿತ್ತು. ಗಂಗಾ ನದಿಯಲ್ಲಿ ಪುಣ್ಯಸ್ನಾನ ಮಾಡಲು ಸಾವಿರಾರು ಭಕ್ತರು ಗಂಗಾ ಘಾಟ್‌ಗೆ ಭೇಟಿ ನೀಡಿದ್ದಾಗ ನಿಯಂತ್ರಿಸಲಾಗದ ಜನಸಂದಣಿಯಿಂದಾಗಿ ಕಾಲ್ತುಳಿತದ ಘಟನೆ ನಡೆದಿತ್ತು. ಸ್ಥಳದಲ್ಲಿ ಉಪಸ್ಥಿತರಿದ್ದ ಎಸ್‌ಡಿಆರ್‌ಎಫ್ ಸಿಬ್ಬಂದಿಗಳು ಜನರನ್ನು ಗಂಗಾನದಿಯ ಪಾಲಾಗುವುದರಿಂದ ರಕ್ಷಿಸಿದ್ದರು.

ಈ ಕಾಲ್ತುಳಿತದ ವೀಡಿಯೊವನ್ನೇ ಮಹಾ ಕುಂಭಮೇಳದ್ದು ಎಂದು ಸುಳ್ಳೇ ಹಂಚಿಕೊಳ್ಳಲಾಗಿದೆ ಎನ್ನುವುದು ಸ್ಪಷ್ಟವಾಗಿದೆ.

ಈ ಲೇಖನವನ್ನು ಮೊದಲು factly.in ಪ್ರಕಟಿಸಿದೆ. ʼಶಕ್ತಿ ಕಲೆಕ್ಟಿವ್‌ʼನ ಭಾಗವಾಗಿ ವಾರ್ತಾ ಭಾರತಿ ಅನುವಾದಿಸಿದೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - factly.in

contributor

Similar News