×
Ad

ಮಹಾ ಕುಂಭಮೇಳ ಕುರಿತು ತಪ್ಪು ಮಾಹಿತಿ | 53 ಸಾಮಾಜಿಕ ಮಾಧ್ಯಮ ಖಾತೆಗಳ ವಿರುದ್ಧ ಎಫ್‌ಐಆರ್

Update: 2025-02-14 20:19 IST

ಲಕ್ನೋ: ಪ್ರಯಾಗರಾಜ್‌ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದ ಕುರಿತು ತಪ್ಪು ಮಾಹಿತಿಗಳನ್ನು ಹರಡಿದ್ದ ಆರೋಪದಲ್ಲಿ 53 ಸಾಮಾಜಿಕ ಮಾಧ್ಯಮ ಖಾತೆಗಳ ವಿರುದ್ಧ ಉತ್ತರ ಪ್ರದೇಶ ಪೋಲಿಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

ಮಹಾ ಕುಂಭಮೇಳ ಕುರಿತು ನಕಲಿ ಸುದ್ದಿಗಳನ್ನು ಹರಡುವುದನ್ನು ತಡೆಯುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಕಟ್ಟುನಿಟ್ಟಿನ ನಿರ್ದೇಶನಗಳ ಬಳಿಕ ಡಿಜಿಪಿ ಪ್ರಶಾಂತ್ ಕುಮಾರ್ ಅವರು ಸಮಗ್ರ ಕ್ರಿಯಾ ಯೋಜನೆಯೊಂದನ್ನು ಜಾರಿಗೊಳಿಸಿದ್ದಾರೆ. ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ದಾರಿ ತಪ್ಪಿಸುವ ಪೋಸ್ಟ್‌ಗಳು ಮತ್ತು ವದಂತಿಗಳ ಮೇಲೆ ನಿಗಾಯಿರಿಸಲು ಮತ್ತು ಸೂಕ್ತ ಕ್ರಮವನ್ನು ಕೈಗೊಳ್ಳಲು ಉತ್ತರ ಪ್ರದೇಶ ಪೋಲಿಸರು ತಜ್ಞರನ್ನೊಳಗೊಂಡ ಏಜೆನ್ಸಿಗಳ ಸಹಯೋಗದಲ್ಲಿ ನಿರಂತರ ಸೈಬರ್ ಗಸ್ತು ನಡೆಸುತ್ತಿದ್ದಾರೆ.

ಫೆ.13ರಂದು ಎರಡು ದಾರಿ ತಪ್ಪಿಸುವ ಎರಡು ವೀಡಿಯೊಗಳನ್ನು ಗುರುತಿಸಲಾಗಿದೆ. ಒಂದು ವೀಡಿಯೊ ಮಹಾ ಕುಂಭ ಬಸ್‌ ನಿಲ್ದಾಣದಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದೆ ಎಂದು ಹೇಳಿತ್ತು. ಆದರೆ ಈ ವೀಡಿಯೊ ವಾಸ್ತವದಲ್ಲಿ 2020ರಲ್ಲಿ ಕೈರೋದಲ್ಲಿ ಉಂಟಾಗಿದ್ದ ಪೈಪ್‌ಲೈನ್ ಬೆಂಕಿಯದ್ದಾಗಿದೆ. ಇನ್ನೊಂದು ವೀಡಿಯೊ ಪಾಟ್ನಾದಲ್ಲಿ ನವಂಬರ್ 2024ರಲ್ಲಿ ಚಲನಚಿತ್ರವೊಂದರ ಪ್ರಚಾರ ಕಾರ್ಯಕ್ರಮದ ದೃಶ್ಯಾವಳಿಗಳನ್ನು ಕುಂಭಮೇಳದ್ದು ಎಂದು ಬಿಂಬಿಸಿತ್ತು.

ಮೊದಲ ವೀಡಿಯೊಕ್ಕೆ ಸಂಬಂಧಿಸಿದಂತೆ ಏಳು ಮತ್ತು ಎರಡನೇ ವೀಡಿಯೊಕ್ಕೆ ಸಂಬಂಧಿಸಿದಂತೆ 15 ಸಾಮಾಜಿಕ ಮಾಧ್ಯಮ ಖಾತೆಗಳ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಕಳೆದೊಂದು ತಿಂಗಳಲ್ಲಿ ಮಹಾ ಕುಂಭಮೇಳ ಕುರಿತು ತಪ್ಪು ಮಾಹಿತಿಗಳನ್ನು ಹರಡಿದ ಆರೋಪದಲ್ಲಿ ಒಟ್ಟು 53 ಸಾಮಾಜಿಕ ಮಾಧ್ಯಮ ಖಾತೆಗಳ ವಿರುದ್ಧ ಎಫ್‌ಐಆರ್ ದಾಖಲಾಗಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News