×
Ad

ಮಹಾರಾಷ್ಟ್ರ: ನಿಂತಿದ್ದ ಬಸ್‌ ನಲ್ಲೇ ಯುವತಿಯ ಅತ್ಯಾಚಾರ

Update: 2025-02-26 20:15 IST

PC :  ANI 

ಪುಣೆ: ಪೊಲೀಸ್ ಠಾಣೆಯಿಂದ ಸುಮಾರು 100 ಮೀಟರ್ ದೂರದಲ್ಲಿ ಹಾಗೂ ಪುಣೆಯ ಜನನಿಬಿಡ ಸ್ವರ್ಗೇಟ್ ಬಸ್‌ಸ್ಟ್ಯಾಂಡ್ ಮಧ್ಯೆ ನಿಲ್ಲಿಸಿದ್ದ ಬಸ್‌ನ ಒಳಗೆ 26 ವರ್ಷದ ಯುವತಿಯ ಅತ್ಯಾಚಾರ ಎಸಗಿದ ಘಟನೆ ಮಂಗಳವಾರ ನಡೆದಿದೆ.

ಈ ಘಟನೆ ಮುಂಜಾನೆ 5.45ರಿಂದ ಬೆಳಗ್ಗೆ 6.30ರ ನಡುವೆ ನಡೆದಿದೆ. ಆರೋಪಿಯನ್ನು ದತ್ತಾತ್ರೇಯ ರಾಮದಾಸ್ ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಈಗಾಗಲೇ ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಆದರೆ, ಈತನನ್ನು ಇನ್ನಷ್ಟೇ ಬಂಧಿಸಬೇಕಿದೆ. ಈತನ ಬಂಧಿಸಲು 8 ವಿಶೇಷ ತಂಡವನ್ನು ರೂಪಿಸಲಾಗಿದೆ ಹಾಗೂ ಶ್ವಾನ ದಳವನ್ನು ನಿಯೋಜಿಸಲಾಗದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮನೆ ಕೆಲಸ ಮಾಡುತ್ತಿರುವ ಯುವತಿ ಸತರಾ ಜಿಲ್ಲೆಯ ಫಲ್ಟಾನ್ ಗ್ರಾಮದಲ್ಲಿರುವ ತನ್ನ ನಿವಾಸಕ್ಕೆ ತೆರಳಲು ಬಸ್ ಹತ್ತಿದಾಗ ದತ್ತಾತ್ರೇಯ ರಾಮದಾಸ್ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಹಾಗೂ ಹಲ್ಲೆ ನಡೆಸಿದ್ದಾನೆ ಎಂದು ಅವರು ಹೇಳಿದ್ದಾರೆ.

‘‘ಆತ ನನ್ನನ್ನು ಸಹೋದರಿ ಎಂದು ಕರೆದ. ಎಲ್ಲಿಗೆ ಹೋಗಬೇಕು ಎಂದು ಕೇಳಿದ. ಅನಂತರ ನಿಲ್ಲಿಸಿದ್ದ ಬಸ್‌ನತ್ತ ಕರೆದೊಯ್ದ. ಬಸ್‌ನ ಒಳಗೆ ಬೆಳಕು ಇಲ್ಲದೇ ಇರುವುದನ್ನು ಗಮನಿಸಿ ನಾನು ಹಿಂಜರಿದೆ. ಆಗ ಆತ ಇತರ ಪ್ರಯಾಣಿಕರು ನಿದ್ರಿಸುತ್ತಿದ್ದಾರೆ ಎಂದು ಹೇಳಿದ. ನಾನು ಬಸ್ ಹತ್ತುತ್ತಿದ್ದಂತೆ ಆತ ಬಸ್‌ನ ಬಾಗಿಲು ಹಾಕಿ ನನ್ನ ಮೇಲೆ ಅತ್ಯಾಚಾರ ಎಸಗಿದ’’ಎಂದು ಯುವತಿ ಆರೋಪಿಸಿದ್ದಾರೆ.

ನಾವು ಪ್ರಕರಣ ದಾಖಲಿಸಿಕೊಂಡಿದ್ದೇವೆ. ಸಿಸಿಟಿವ ದೃಶ್ಯಾವಳಿಗಳನ್ನು ಸಂಗ್ರಹಿಸಿದ್ದೇವೆ. ತನಿಖೆ ಆರಂಭಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News