ಮಹಾರಾಷ್ಟ್ರ: ಔಷಧ ಕಂಪೆನಿ ಘಟಕದಲ್ಲಿ ಸ್ಫೋಟ ಓರ್ವ ಮೃತ್ಯು, 6 ಮಂದಿಗೆ ಗಾಯ
Update: 2025-06-17 20:44 IST
ಸಾಂದರ್ಭಿಕ ಚಿತ್ರ
ನಾಗಪುರ: ನಾಗಪುರ ಜಿಲ್ಲೆಯ ಔಷಧ ಕಂಪೆನಿಯ ಘಟಕವೊಂದರಲ್ಲಿ ಸಂಭವಿಸಿದ ಸ್ಫೋಟದಲ್ಲಿ ಓರ್ವ ಮೃತಪಟ್ಟಿದ್ದಾನೆ ಹಾಗೂ 6 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಪೂರ್ವ ಮಹಾರಾಷ್ಟ್ರದ ಭಿಲ್ಗಾಂವ್‌ನಲ್ಲಿರುವ ಅಂಕಿತ್ ಪಲ್ಪ್ಸ್ ಆ್ಯಂಡ್ ಬೋರ್ಡ್ಸ್ ಪ್ರೈವೇಟ್ ಲಿಮಿಟೆಡ್‌ನ ಘಟಕದ ರಿಯಾಕ್ಟರ್ ನಲ್ಲಿ ಸ್ಪೋಟ ಸಂಭವಿಸಿತು. ಸ್ಫೋಟ ಸಂಭವಿಸಲು ಕಾರಣ ಏನೆಂಬ ಬಗ್ಗೆ ಇನ್ನಷ್ಟೆ ನಿರ್ಧರಿಸಬೇಕಿದೆ.
ಈ ಘಟನೆ ಬೆಳಗ್ಗೆ ಸುಮಾರು 11 ಗಂಟೆಗೆ ಸಂಭವಿಸಿದೆ. ಇದರಿಂದ ಓರ್ವ ಸಾವನ್ನಪ್ಪಿದ್ದಾನೆ. ಇತರ 6 ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ ಓರ್ವನ ಸ್ಥಿತಿ ಚಿಂತಾಜನಕವಾಗಿದೆ. ಆತ ಸಮೀಪದ ಕಾಮ್ಟಿ ಪಟ್ಟಣದಲ್ಲಿರುವ ಆಸ್ಪತ್ರೆಯಲ್ಲಿ ಇತರರೊಂದಿಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.