×
Ad

ಮಹಾರಾಷ್ಟ್ರ: ಮಾರ್ಚ್-ಎಪ್ರಿಲ್‌ನಲ್ಲಿ 479 ರೈತರು ಆತ್ಮಹತ್ಯೆ

Update: 2025-07-04 21:08 IST

ಸಾಂದರ್ಭಿಕ ಚಿತ್ರ | PTI 

ಹೊಸದಿಲ್ಲಿ: ಈ ವರ್ಷ ಮಾರ್ಚ್‌ ನಿಂದ ಎಪ್ರಿಲ್ ವರೆಗೆ ಮಹಾರಾಷ್ಟ್ರದಲ್ಲಿ ಒಟ್ಟು 479 ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ವರದಿಯಾಗಿದೆ ಎಂದು ರಾಜ್ಯ ಪರಿಹಾರ ಹಾಗೂ ಪುನರ್ವಸತಿ ಸಚಿವ ಮಕರಂದ ಪಾಟೀಲ್ ಶುಕ್ರವಾರ ವಿಧಾನ ಸಭೆಗೆ ತಿಳಿಸಿದ್ದಾರೆ.

ಮರಾಠಾವಾಡ ಹಾಗೂ ವಿದರ್ಭದಲ್ಲಿ ಮಾರ್ಚ್‌ನಲ್ಲಿ 250 ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ವರದಿಯಾಗಿದೆ. ರಾಜ್ಯಾದ್ಯಂತ ಎಪ್ರಿಲ್‌ನಲ್ಲಿ 229 ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ವರದಿಯಾಗಿದೆ ಎಂದು ಪ್ರಶ್ನೋತ್ತರ ವೇಳೆ ಸಂದರ್ಭ ಅವರು ಲಿಖಿತ ಪ್ರತಿಕ್ರಿಯೆಲ್ಲಿ ತಿಳಿಸಿದ್ದಾರೆ.

ಮಾರ್ಚ್‌ ನಲ್ಲಿ ವರದಿಯಾದ 250 ಪ್ರಕರಣಗಳಲ್ಲಿ 102 ಪ್ರಕರಣಗಳು ಸರಕಾರದ ನಿಯಮಗಳ ಪ್ರಕಾರ ಆರ್ಥಿಕ ನೆರವಿಗೆ ಅರ್ಹವಾಗಿದೆ ಎಂದು ಕಂಡು ಬಂದಿದ್ದು, 77 ಪ್ರಕರಣಗಳಲ್ಲಿ ಪರಿಹಾರ ಮೊತ್ತ ವಿತರಿಸಲಾಗಿದೆ.

ಒಟ್ಟು 62 ಪ್ರಕರಣಗಳು ಪರಿಹಾರಕ್ಕೆ ಅನರ್ಹವಾಗಿದೆ ಎಂದು ಕಂಡು ಬಂದಿದ್ದು, 86 ಪ್ರಕರಣಗಳ ಕುರಿತ ವಿಚಾರಣೆ ಬಾಕಿ ಉಳಿದಿವೆ ಎಂದು ಪಾಟಿಲ್ ಹೇಳಿದ್ದಾರೆ.

‘‘ಎಪ್ರಿಲ್‌ ನಲ್ಲಿ 229 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಲ್ಲಿ 74 ಮಂದಿ ರೈತರು ಪರಿಹಾರಕ್ಕೆ ಅರ್ಹರಾಗಿದ್ದಾರೆ. ಈ 74 ಪ್ರಕರಣಗಳ ಪೈಕಿ 33 ಪ್ರಕರಣಗಳಲ್ಲಿ ಪರಿಹಾರ ಬಿಡುಗಡೆ ಮಾಡಲಾಗಿದೆ’’ ಸಚಿವರು ಸದನಕ್ಕೆ ಮಾಹಿತಿ ನೀಡಿದರು.

ಹಣಕಾಸು ನೆರವಿನ ಮೊತ್ತದ ಏರಿಕೆ ಪರಿಗಣನೆಯಲ್ಲಿ ಇಲ್ಲ ಎಂದು ಮಕರಂದ ಪಾಟೀಲ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News