×
Ad

ಮಹಾರಾಷ್ಟ್ರ ಸಾರ್ವಜನಿಕ ರಕ್ಷಣೆ ಕಾಯ್ದೆಗೆ ಮಹಾರಾಷ್ಟ್ರ ವಿಧಾನಸಭೆ ಅನುಮೋದನೆ

Update: 2025-07-12 18:56 IST

Photo Credit: PTI

ಮುಂಬೈ: ಮಹತ್ವದ ನಡೆಯೊಂದರಲ್ಲಿ ರಾಜ್ಯದ ಆಂತರಿಕ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲು ಮಹಾಯುತಿ ಸರಕಾರ ಮಂಡಿಸಿದ 'ಮಹಾರಾಷ್ಟ್ರ ಸಾರ್ವಜನಿಕ ರಕ್ಷಣಾ ಮಸೂದೆʼಯನ್ನು ಗುರುವಾರ ಮಹಾರಾಷ್ಟ್ರ ರಾಜ್ಯ ವಿಧಾನಸಭೆ ಅಂಗೀಕರಿಸಿದೆ.

ರಾಜ್ಯ ಗೃಹ ಸಚಿವರೂ ಆದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮಂಡಿಸಿದ ಈ ಮಸೂದೆಯು ಸಂಘಟಿತ ಭಯೋತ್ಪಾದಕ ಬೆದರಿಕೆಗಳನ್ನು ಮಟ್ಟ ಹಾಕುವ ಸಮಗ್ರ ಕಾನೂನಾತ್ಮಕ ಚೌಕಟ್ಟನ್ನು ಹೊಂದಿದೆ. ಸಾರ್ವಜನಿಕರ ಸುರಕ್ಷತೆಯ ಬಗ್ಗೆ ಸರಕಾರದ ಬದ್ಧತೆ ಹಾಗೂ ಸಾಂವಿಧಾನಿಕ ರಕ್ಷಣೆಯ ಕುರಿತು ವಿಸ್ತೃತ ಚರ್ಚೆ ಹಾಗೂ ಪರಾಮರ್ಶೆ ನಡೆದ ನಂತರ, ಈ ಮಸೂದೆಯನ್ನು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು.

ಸರಕಾರ ಹಾಗೂ ಅದರ ಸಂಸ್ಥೆಗಳ ಕಾರ್ಯನಿರ್ವಹಣೆಗೆ ಅಡ್ಡಿಯುಂಟು ಮಾಡುವಂತಹ ಎಡಪಂಥೀಯ ಭಯೋತ್ಪಾದಕ ಸಂಘಟನೆಗಳನ್ನು ನಿರ್ದಿಷ್ಟವಾಗಿ ಗುರಿಯಾಗಿಸಿಕೊಂಡು ಈ ಮಸೂದೆಯನ್ನು ರೂಪಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News