×
Ad

ಆಸ್ತಿಗಳಲ್ಲಿ ಏರಿಕೆ: ಮಹಾರಾಷ್ಟ್ರ ಸಚಿವ ಸಂಜಯ್ ಶಿರಸಾಟ್‌ ಗೆ ಐಟಿ ನೋಟಿಸ್

Update: 2025-07-10 21:24 IST

ಸಂಜಯ ಶಿರಸಾಟ್‌ | Credit: Facebook/Sanjay Shirsat

ಮುಂಬೈ: 2019 ಮತ್ತು 2024ರ ವಿಧಾನಸಭಾ ಚುನಾವಣೆಗಳ ನಡುವೆ ತನ್ನ ಆಸ್ತಿಗಳಲ್ಲಿ ಏರಿಕೆ ಕುರಿತು ವಿವರಣೆಯನ್ನು ಕೋರಿ ಆದಾಯ ತೆರಿಗೆ ಇಲಾಖೆಯಿಂದ ತಾನು ನೋಟಿಸ್‌ನ್ನು ಸ್ವೀಕರಿಸಿರುವುದಾಗಿ ಮಹಾರಾಷ್ಟ್ರದ ಸಾಮಾಜಿಕ ನ್ಯಾಯ ಸಚಿವ ಸಂಜಯ್ ಶಿರಸಾಟ್ ಅವರು ಗುರುವಾರ ತಿಳಿಸಿದರು.

ಔರಂಗಾಬಾದ್(ಪಶ್ಚಿಮ) ಕ್ಷೇತ್ರದ ಶಾಸಕರಾಗಿರುವ ಶಿರಸಾಟ್ ಉಪಮುಖ್ಯಮಂತ್ರಿ ಏಕನಾಥ ಶಿಂದೆಯವರ ಶಿವಸೇನೆಗೆ ಸೇರಿದ್ದಾರೆ.

‘ರಾಜಕೀಯ ನಾಯಕರ ವಿರುದ್ಧ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಜನರು ಭಾವಿಸಿದ್ದಾರೆ. ಅದು ಹಾಗಲ್ಲ. ನೋಟಿಸಿಗೆ ನಾನು ಕಾನೂನುಬದ್ಧವಾಗಿ ಉತ್ತರಿಸುತ್ತೇನೆ’ ಎಂದು ಇಲ್ಲಿ ಶಾಸಕಾಂಗ ಸಂಕೀರ್ಣದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಶಿರಸಾಟ್ ಹೇಳಿದರು.

ನಿಮ್ಮ ವಿರುದ್ಧ ಏನಾದರೂ ಷಡ್ಯಂತ್ರವನ್ನು ಶಂಕಿಸಿದ್ದೀರಾ ಎಂಬ ಪ್ರಶ್ನೆಗೆ ಶಿರಸಾಟ್,‘ಕೆಲವರು ದೂರು ಸಲ್ಲಿಸಿದ್ದಾರೆ ಮತ್ತು ಆದಾಯ ತೆರಿಗೆ ಇಲಾಖೆಯು ನೋಟಿಸ್ ನೀಡಿದೆ. ವ್ಯವಸ್ಥೆಯು ತನ್ನ ಕೆಲಸವನ್ನು ಮಾಡುತ್ತಿದೆ ಮತ್ತು ಆ ಬಗ್ಗೆ ನನಗೆ ಯಾವುದೇ ಸಮಸ್ಯೆಯಿಲ್ಲ. ನಾನು ಯಾವುದೇ ಒತ್ತಡದಲ್ಲಿಲ್ಲ’ ಎಂದು ಉತ್ತರಿಸಿದರು.

ಇತ್ತೀಚಿಗೆ ಶಿರಸಾಟ್ ಮತ್ತು ಅವರ ಪುತ್ರ ಹೋಟೆಲ್ ವ್ಯವಹಾರವೊಂದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ವಿಧಾನ ಪರಿಷತ್‌ ನಲ್ಲಿ ಆರೋಪಗಳನ್ನು ಎದುರಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News