×
Ad

ಅಜಿತ್‌ ಪವಾರ್ ಬಣದ ಎನ್ ಸಿಪಿ ಶಾಸಕರ ಅನರ್ಹತೆ ನಿರ್ಧಾರ ಕೈಗೊಳ್ಳಲು ಮಹಾರಾಷ್ಟ್ರ ಸ್ಪೀಕರ್ ಗೆ ಗಡುವು ವಿಸ್ತರಣೆ

Update: 2024-01-29 22:27 IST

ಅಜಿತ್‌ ಪವಾರ್ | Photo: PTI  

ಹೊಸದಿಲ್ಲಿ: ಸರ್ವೋಚ್ಚ ನ್ಯಾಯಾಲಯವು ಎನ್ ಸಿಪಿ ಯಿಂದ ಪ್ರತ್ಯೇಕಗೊಂಡಿರುವ ಉಪ ಮುಖ್ಯಮಂತ್ರಿ ಅಜಿತ್‌ ಪವಾರ್ ನೇತೃತ್ವದ ಗುಂಪಿನ ಶಾಸಕರ ಅನರ್ಹತೆ ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ಬಗ್ಗೆ ನಿರ್ಧಾರವನ್ನು ಕೈಗೊಳ್ಳಲು ಮಹಾರಾಷ್ಟ್ರ ಸ್ಪೀಕರ್ ರಾಹುಲ್ ನಾರ್ವೇಕರ್ ಅವರಿಗೆ ನೀಡಿದ್ದ ಜ.1ರ ಗಡುವನ್ನು ಫೆ.15ಕ್ಕೆ ವಿಸ್ತರಿಸಿದೆ.

ಸರ್ವೋಚ್ಚ ನ್ಯಾಯಾಲಯವು ಕಳೆದ ವರ್ಷದ ಅಕ್ಟೋಬರ್ನಲ್ಲಿ ಅಜಿತ್‌ ಪವಾರ್ ಗುಂಪಿನ ವಿರುದ್ಧ ಸಲ್ಲಿಸಲಾಗಿರುವ ಒಂಭತ್ತು ಅನರ್ಹತೆ ಅರ್ಜಿಗಳ ಕುರಿತು ನಿರ್ಧಾರವನ್ನು ತೆಗೆದುಕೊಳ್ಳಲು ಸ್ಪೀಕರ್ಗೆ ಜ.31ರವರೆಗೆ ಗಡುವು ನೀಡಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News