ಮತಗಳಿಗಾಗಿ ಪ್ರಧಾನಿ ಮೋದಿ ಕಾಳಿಯನ್ನು ಜಪಿಸುತ್ತಿದ್ದಾರೆ: ಮಹುವಾ ಮೊಯಿತ್ರಾ ಟೀಕೆ
ಮಹುವಾ ಮೊಯಿತ್ರಾ | PC : PTI
ಹೊಸದಿಲ್ಲಿ : ಪಶ್ಚಿಮ ಬಂಗಾಳದಲ್ಲಿ ನಡೆದ ರ್ಯಾಲಿಯಲ್ಲಿ ಕಾಳಿ ದೇವಿಗೆ ಜೈಕಾರ ಹಾಕಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಟೀಕಿಸಿದ್ದಾರೆ. ಇಂತಹ ತಂತ್ರಗಳ ಮೂಲಕ ಬಂಗಾಳಿ ಮತದಾರರನ್ನು ಸೆಳೆಯುವ ಪ್ರಯತ್ನ ಫಲಿಸುವುದಿಲ್ಲ ಎಂದು ಹೇಳಿದ್ದಾರೆ.
ದುರ್ಗಾಪುರದಲ್ಲಿ ನಡೆದ ರ್ಯಾಲಿಯಲ್ಲಿ ಜೈ ಮಾ ಕಾಳಿ, ಜೈ ಮಾ ದುರ್ಗಾ ಎಂದು ಹೇಳುವ ಮೂಲಕ ಮೋದಿ ಭಾಷಣವನ್ನು ಪ್ರಾರಂಭಿಸಿದರು. ಜೈ ಶ್ರೀ ರಾಮ್ ಎಂದು ಹೇಳುವ ಮೂಲಕ ಭಾಷಣವನ್ನು ಕೊನೆಗೊಳಿಸಿದ್ದರು.
ಬಂಗಾಳಿ ಮತಗಳಿಗಾಗಿ ಮಹಾ ಕಾಳಿಯನ್ನು ಜಪಿಸಲು ನೀವು ಪ್ರಾರಂಭಿಸಿರುವುದು ʼಸ್ವಲ್ಪ ತಡವಾಯಿತುʼ. ಅವರು ʼಧೋಕ್ಲಾ ತಿನ್ನುವುದಿಲ್ಲ ಮತ್ತು ಎಂದಿಗೂ ಇಲ್ಲʼ ಎಂದು ಮಹುವಾ ಮೊಯಿತ್ರಾ ಹೇಳಿದರು.
ಪ್ರಧಾನಿಯ ತವರು ಗುಜರಾತ್‌ನಲ್ಲಿ ಧೋಕ್ಲಾ ಜನಪ್ರಿಯ ತಿಂಡಿಯಾಗಿದೆ.
'ಧೋಕ್ಲಾ' ಎಂಬ ಉಲ್ಲೇಖವು ಜನರು ಏನು ತಿನ್ನಬೇಕು ಎಂಬುದನ್ನು ಬಿಜೆಪಿ ಹೇಳುತ್ತದೆ ಎಂಬ ಅವರ ಹಿಂದಿನ ಟೀಕೆಗಳಂತೆಯೇ ಇತ್ತು. ಬಂಗಾಳದಾದ್ಯಂತ ಹಲವಾರು ಕಾಳಿ ದೇವಾಲಯಗಳಲ್ಲಿ, ಮಾಂಸಾಹಾರವನ್ನು ದೇವಿಗೆ ಅರ್ಪಿಸಲಾಗುತ್ತದೆ.
2022ರಲ್ಲಿ ಮೊಯಿತ್ರಾ ಕಾಳಿಯನ್ನು ಮಾಂಸಾಹಾರ ಮತ್ತು ಮದ್ಯಪಾನ ಸ್ವೀಕರಿಸುವ ದೇವತೆ ಎಂದು ಕರೆದು ವಿವಾದಕ್ಕೀಡಾಗಿದ್ದರು. ಅವರ ವಿರುದ್ಧ ಎಫ್ಐಆರ್ ಕೂಡ ದಾಖಲಿಸಲಾಗಿತ್ತು.