×
Ad

ಮಲಯಾಳಂ ನಟ ವಿನೋದ್ ಥಾಮಸ್ ಕಾರಿನೊಳಗೆ ಶವವಾಗಿ ಪತ್ತೆ

Update: 2023-11-19 09:44 IST

Photo : Indiatoday

ಕೊಟ್ಟಾಯಂ: ಮಲಯಾಳಂ ನಟ ವಿನೋದ್ ಥಾಮಸ್  ಕೋಟ್ಟಯಂನ ಪಂಪಾಡಿ ಬಳಿಯ ಹೋಟೆಲ್‌ನಲ್ಲಿ ನಿಲ್ಲಿಸಿದ್ದ ಕಾರಿನೊಳಗೆ ಶವವಾಗಿ ಪತ್ತೆಯಾಗಿದ್ದಾರೆ ಎಂದು indiatoday.in ವರದಿ ಮಾಡಿದೆ.

ಹೊಟೇಲ್‌ ಆವರಣದಲ್ಲಿ ತುಂಬಾ ಸಮಯ ಪಾರ್ಕ್‌ ಮಾಡಿದ್ದ ಕಾರೊನೊಳಗೆ ನಟನ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಾವಿನ ಕಾರಣವನ್ನು ಖಚಿತಪಡಿಸಿಕೊಳ್ಳಲು ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.

ವಿನೋದ್ ಥಾಮಸ್ ಸಾವಿನ ಹಿಂದಿನ ಕಾರಣವನ್ನು ಬಹಿರಂಗಪಡಿಸಲಾಗಿಲ್ಲ.ವರದಿಗಳ ಪ್ರಕಾರ, ಕಾರಿನ ಎಸಿಯಿಂದ ವಿಷಕಾರಿ ಅನಿಲವನ್ನು ಉಸಿರಾಡಿದ್ದರಿಂದ ಸಾವಿಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಆದರೆ, ಮರಣೋತ್ತರ ಪರೀಕ್ಷೆಯ ನಂತರವಷ್ಟೇ ಈ ಬಗ್ಗೆ ಖಚಿತ ಮಾಹಿತಿ ದೊರೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಥಾಮಸ್ ಅವರು 'ಅಯ್ಯಪ್ಪನುಂ ಕೋಶಿಯುಂ', 'ನತ್ತೋಲಿ ಒರು ಚೆರಿಯ ಮೀನಲ್ಲ', 'ಒರು ಮುರೈ ವಂದ್ ಪಾತಾಯ', 'ಹ್ಯಾಪಿ ವೆಡ್ಡಿಂಗ್' ಮತ್ತು 'ಜೂನ್' ಮುಂತಾದ ಚಲನಚಿತ್ರಗಳಲ್ಲಿನ ಪಾತ್ರಗಳಿಗೆ ಹೆಸರುವಾಸಿಯಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News