×
Ad

ಚೆನ್ನೈ ವಿಮಾನ ನಿಲ್ದಾಣದಿಂದ ಹೊರಟಿದ್ದ ವಿಮಾನದ ಚಕ್ರ ಸ್ಫೋಟ: ಪ್ರಯಾಣಿಕರು ಸುರಕ್ಷಿತ

Update: 2024-01-18 14:31 IST

ಸಾಂದರ್ಭಿಕ ಚಿತ್ರ (PTI)

ಚೆನ್ನೈ: ತಮಿಳುನಾಡಿನ ಚೆನ್ನೈ ವಿಮಾನ ನಿಲ್ದಾಣದಿಂದ ಮಲೇಶಿಯಾದ ಕೌಲಲಂಪುರಕ್ಕೆ ಹೊರಟಿದ್ದ ಅಂತರಾಷ್ಟ್ರೀಯ ವಿಮಾನವೊಂದರ ಚಕ್ರ ಸ್ಪೋಟಗೊಂಡಿದೆ. ಅವಗಢದ ವೇಳೆ 130 ಪ್ರಯಾಣಿಕರು ವಿಮಾನದಲ್ಲಿದ್ದರಾದರೂ, ಅದೃಷ್ಟವಶಾತ್ ಯಾವುದೇ ದುರಂತ ಸಂಭವಿಸಿಲ್ಲ.

ಕೌಲಾಲಂಪುರದ ಕಡೆಗೆ ಹಾರಲು ಅಣಿಯಾಗಿದ್ದ ವಿಮಾನದ ಹಿಂಬದಿಯ ಚಕ್ರ ಕಡೆ ಕ್ಷಣದಲ್ಲಿ ಸ್ಪೋಟಗೊಂಡಿದ್ದು, ತಕ್ಷಣವೇ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಲಾಗಿದೆ‌ ಎಂದು ವಿಮಾನ ನಿಲ್ದಾಣ ಅಧಿಕಾರಿಗಳು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News