×
Ad

ಮಮತಾ ಬ್ಯಾನರ್ಜಿ ಆಸ್ಪತ್ರೆಯಿಂದ ಬಿಡುಗಡೆ

Update: 2024-03-15 21:54 IST

ಮಮತಾ ಬ್ಯಾನರ್ಜಿ | Photo: ANI 

ಕೋಲ್ಕತಾ: ಗುರುವಾರ ತನ್ನ ನಿವಾಸದಲ್ಲಿ ಬಿದ್ದು ಹಣೆಗೆ ಗಾಯವಾಗಿ ಆಸ್ಪತ್ರೆಗೆ ದಾಖಲಾಗಿದ್ದ ಟಿಎಂಸಿ ಮುಖ್ಯಸ್ಥೆ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ಶುಕ್ರವಾರ ಬಿಡುಗಡೆಗೊಳಿಸಲಾಗಿದೆ.

ಬ್ಯಾನರ್ಜಿಯವರ ಹಣೆಗೆ ಆಗಿದ್ದ ಗಾಯಕ್ಕೆ ಮೂರು ಮತ್ತು ಮೂಗಿಗೆ ಆಗಿದ್ದ ಗಾಯಕ್ಕೆ ಒಂದು ಹೊಲಿಗೆಗಳನ್ನು ಹಾಕಲಾಗಿದೆ. ಅವರ ದೇಹಸ್ಥಿತಿ ಸ್ಥಿರವಾಗಿದ್ದು ಪರೀಕ್ಷೆಗಳಿಂದ ದೃಢಪಟ್ಟ ಬಳಿಕ ಅವರಿಗೆ ನಿವಾಸಕ್ಕೆ ಮರಳಲು ಅವಕಾಶ ನೀಡಲಾಗಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News