×
Ad

ಶಾಂತಿನಿಕೇತನದಲ್ಲಿ ಯುನೆಸ್ಕೊ ಫಲಕ ತೆರವಿಗೆ ಮಮತಾ ಆಗ್ರಹ; ರವೀಂದ್ರ ಠಾಗೂರ್ ಹೆಸರಿಲ್ಲದೆ ಇರುವುದಕ್ಕೆ ಆಕ್ರೋಶ

Update: 2023-10-28 22:40 IST

ಕೋಲ್ಕತಾ: ಶಾಂತಿನಿಕೇತನದಲ್ಲಿ ಅಳವಡಿಸಲಾಗಿರುವ ಯುನೆಸ್ಕೊದ ಜಾಗತಿಕ ಪಾರಂಪರಿಕ ತಾಣದ ಸ್ಥಾನಮಾನದ ಫಲಕಗಳಲ್ಲಿ ‘ವಿಶ್ವಕವಿ’ ರವೀಂದ್ರನಾಥ ಠಾಗೂರ್ ಅವರ ಹೆಸರಿಲ್ಲದೆ ಇರುವುದರಿಂದ ಅವುಗಳನ್ನು ತೆರವುಗೊಳಿಸುವಂತೆ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶನಿವಾರ ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ.

ಶಾಂತಿನಿಕೇತನ- ವಿಶ್ವಭಾರತಿಯ ಸಂಸ್ಥಾಪಕ ರಬೀಂದ್ರನಾಥ ಠಾಗೋರ್ ಅವರ ಹೆಸರನ್ನು ಈ ಫಲಕಗಳಲ್ಲಿ ನಮೂದಿಸದೆ ಇರುವದು ಈ ನೊಬೆಲ್ ಪುರಸ್ಕೃತ ವಿದ್ವಾಂಸನಿಗೆ ಮಾಡಿದ ಅಪಮಾನವೆಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘‘‘ಗುರುದೇವ ರವೀಂದ್ರನಾಥ ಠಾಗೋರ್ ಅವರು ಜಾಗತಿಕ ಪರಂಪರೆಯ ತಾಣ ವಿಶ್ವಭಾರತಿ ವಿವಿಯನ್ನು ಶಾಂತಿನಿಕೇತನದಲ್ಲಿ ಸೃಷ್ಟಿಸಿದರು. ಶಾಂತಿನಿಕೇತನದ ಹಾಲಿ ಸಾಂಸ್ಥಿಕ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಅಳವಡಿಸಿದ ಸ್ಮಾರಕ ಫಲಕಗಳಲ್ಲಿ ಉಪಕುಲಪತಿಯವರ ಹೆಸರೂ ಕೂಡಾ ಇದೆ. ಆದರೆ ಗುರುದೇವ ರಬೀಂದ್ರನಾಥ ಠಾಗೋರ್ ಅವರ ಹೆಸರಿಲ್ಲ’’ ಎಂದು ಮಮತಾ ಬ್ಯಾನರ್ಜಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

‘‘ಇದು ಠಾಗೋರ್ ಅವರಿಗೆ ಮಾಡಿದ ಅಪಮಾನವಾಗಿದೆ ಹಾಗೂ ವಸಾಹತುಶಾಹಿ ಪ್ರಯತ್ನಗಳನ್ನು ಸೃಷ್ಟಿಸುವ ನಮ್ಮ ದೇಶದ ಸಂಸ್ಥಾಪಕ ಪಿತಾಮಹರುಗಳ ಪ್ರಯತ್ನಗಳನ್ನು ಕ್ಷುಲ್ಲಕಗೊಳಿಸಿದೆ” ಎಂದು ಮಮತಾ ಟ್ವೀಟ್ ಮಾಡಿದ್ದಾರೆ.

ವಿಶ್ವಭಾರತಿ ವಿವಿಯ ಅಧಿಕಾರಿಗಳು ಶಾಂತಿನಿಕೇತನದಲ್ಲಿ ಅಳಡವಿಸಲಾದ ಅಮೃತಶಿಲೆಯ ಫಲಕದಲ್ಲಿ ವಿವಿ ಕುಲಪತಿಯೂ ಆಗಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಉಪಕುಲಪತಿ ಬಿದ್ಯುತ್ ಚಕ್ರವರ್ತಿ ಅವರ ಹೆಸರನ್ನು ಅಳವಡಿಸಿದೆ. ಆದರೆ ರಬೀಂದ್ರನಾಥ ಠಾಗೋರ್ ಅವರ ಹೆಸರನ್ನು ಉಲ್ಲೇಖಿಸದೆ ಇರುವುದು ವ್ಯಾಪಕ ಅಸಮಾಧಾನಕ್ಕೆ ಕಾರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News