×
Ad

ಮಧ್ಯಪ್ರದೇಶ | ಕಳ್ಳತನದ ಶಂಕೆಯಲ್ಲಿ ಯುವಕನಿಗೆ ಥಳಿತ : ಸಂತ್ರಸ್ತನ ಬಳಿ ಬರೀ ಒಣ ರೊಟ್ಟಿ, ಉಪ್ಪು ಪತ್ತೆ!

ಥಳಿತದ ವೀಡಿಯೊ ವೈರಲ್ ಬೆನ್ನಲ್ಲೇ ವ್ಯಾಪಕ ಆಕ್ರೋಶ

Update: 2025-08-07 16:35 IST

Screengrab:X/@ambedkariteIND

ಭೋಪಾಲ್ : ಮಧ್ಯಪ್ರದೇಶದ ಸತ್ನಾದಲ್ಲಿ ಕಳ್ಳತನದ ಶಂಕೆಯಲ್ಲಿ ವ್ಯಕ್ತಿಯೋರ್ವ ಯುವಕನೋರ್ವನಿಗೆ ಅಮಾನವೀಯವಾಗಿ ಥಳಿಸಿದ್ದಾನೆ. ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ವೈರಲ್ ವೀಡಿಯೊದಲ್ಲಿ ವ್ಯಕ್ತಿಯೋರ್ವ ಯುವಕನಿಗೆ ಕೋಲಿನಿಂದ ಥಳಿಸುತ್ತಿರುವುದು ಕಂಡು ಬಂದಿದೆ. ಈ ವೇಳೆ ಯುವಕ ಓಡಿ ಹೋಗದೆ ಆ ವ್ಯಕ್ತಿಯನ್ನು ತಡೆಯಲು ಮತ್ತು ತನ್ನನ್ನು ತಾನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಆತನನ್ನು ಪರಿಶೀಲನೆ ನಡೆಸಿದಾಗ ಆತನ ಬಳಿ ಒಣ ರೊಟ್ಟಿ ಮತ್ತು ಸ್ವಲ್ಪ ಉಪ್ಪು ಮಾತ್ರ ಪತ್ತೆಯಾಗಿದೆ ಎಂದು ಹೇಳಲಾಗಿದೆ.

ಯುವಕನ ಮೇಲಿನ ಹಲ್ಲೆ ವೇಳೆ ಸ್ಥಳದಲ್ಲಿ ಹಲವು ಜನರು ಜಮಾಯಿಸಿದ್ದರು. ಆದರೆ, ಯಾರೂ ಕೂಡ ಯುವಕನ ರಕ್ಷಣೆಗೆ ಮುಂದಾಗಿಲ್ಲ. ದಾಳಿಕೋರನನ್ನು ತಡೆದಿಲ್ಲ.

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಹಲವರು ಮಾನವೀಯತೆಯ ಬಗ್ಗೆ ಪ್ರಶ್ನಿಸಿದ್ದಾರೆ. ಸತ್ಯವನ್ನು ತಿಳಿಯದೆ ಅಮಾಯಕನಿಗೆ ಈ ರೀತಿ ನಿರ್ದಯವಾಗಿ ಥಳಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News