×
Ad

‘ಮ್ಯಾಂಗೋ ಮ್ಯಾನ್’ ಖಲೀಮುಲ್ಲಾ ಬೆಳೆದ ಹೊಸ ಮಾವಿನ ತಳಿಗೆ ಸಚಿವ ರಾಜ್‌ ನಾಥ್ ಸಿಂಗ್ ಹೆಸರು

Update: 2025-06-06 22:04 IST

 ರಾಜ್‌ ನಾಥ್ ಸಿಂಗ್ | PC : PTI 

ಲಕ್ನೋ: ಭಾರತದ ‘ಮಾವು ಮನುಷ್ಯ’ಎಂದೇ ಖ್ಯಾತಿ ಪಡೆದಿರುವ ಪದ್ಮಶ್ರೀ ಪುರಸ್ಕೃತ ಹಾಜಿ ಖಲೀಮುಲ್ಲಾ ಖಾನ್ ಅವರು ಲಕ್ನೋದಲ್ಲಿರುವ ಮಲಿಹಾಬಾದ್‌ ನಲ್ಲಿರುವ ತನ್ನ ತೋಪಿನಲ್ಲಿನ 300 ತಳಿಯ ಮಾವಿನ ಮರಗಳನ್ನು ಬೆಳೆಸಿದ್ದಾರೆ. ಇದೀಗ ಅವರ ತಾನು ಬೆಳೆದಿರುವ ನೂತನ ಮಾವಿನ ತಳಿಗೆ ರಕ್ಷಣಾ ಸಚಿವ ರಾಜ್‌ ನಾಥ್ ಸಿಂಗ್ ಅವರ ಹೆಸರನ್ನಿರಿಸಿದ್ದಾರೆ.

ಪಾಕ್‌ ನಲ್ಲಿರುವ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆಯ ಆಪರೇಶನ್ ಸಿಂಧೂರ್ ಕಾರ್ಯಾಚರಣೆಯ ಯಶಸ್ಸಿನಿಂದ ಪ್ರೇರಿತರಾಗಿ ತಾನು ನೂತನ ಮಾವಿನ ತಳಿಗೆ ರಾಜ್‌ ನಾಥ್ ಎಂದು ಹೆಸರಿಸಿದ್ದಾಗಿ ಖಲೀಮುಲ್ಲಾ ಖಾನ್ ತಿಳಿಸಿದ್ದಾರೆ. ರಾಜ್‌ನಾಥ್ ಸಿಂಗ್ ಅವರು ಲಕ್ನೋ ಲೋಕಸಭಾ ಕ್ಷೇತ್ರದ ಸದಸ್ಯರೂ ಆಗಿದ್ದಾರೆ.

ಆಪರೇಶನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ರಾಜ್‌ ನಾಥ್ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಜಗತ್ತಿನಲ್ಲಿ ಅವರ ಹೆಸರನ್ನು ಸ್ಮರಣೀಯವಾಗಬೇಕೆಂಬ ಉದ್ದೇಶದಿಂದ ತಾನು ನೂತನ ಮಾವಿನ ತಳಿಗೆ ಅವರ ಹೆಸರನ್ನು ಇರಿಸಿದ್ದಾಗಿ ಖಲೀಮುಲ್ಲಾ ತಿಳಿಸಿದ್ದಾರೆ

ರಾಜ್‌ ನಾಥ್ ತಳಿಯ ಮಾವು 10 ಇಂಚು ಉದ್ದ ಬೆಳೆಯುತ್ತದೆ ಹಾಗೂ 700 ಗ್ರಾಂ. ತೂಕವಿದೆ. ಮುಂದಿನ ದಿನಗಳಲ್ಲಿ ಅದರ ಭಾರ ಇನ್ನೂ ಹೆಚ್ಚಲಿದೆ ಎಂದು ಖಲೀಮುಲ್ಲಾ ಹೇಳುತ್ತಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News