×
Ad

ಮಣಿಪುರ |ಎರಡನೇ ಹಂತದ ಲೋಕಸಭಾ ಚುನಾವಣೆಗೆ ಮುನ್ನ 3 ಸ್ಫೋಟ, ಸೇತುವೆಗೆ ಹಾನಿ

Update: 2024-04-24 21:45 IST

PC : X 

ಇಂಫಾಲ : ಎರಡನೇ ಹಂತದ ಲೋಕಸಭಾ ಚುನಾವಣೆಗೆ ಎರಡೇ ದಿನಗಳು ಬಾಕಿಯಿರುವಾಗ ಮಣಿಪುರದ ಕಾಂಗ್ಪೊಕ್ಪಿ ಜಿಲ್ಲೆಯಲ್ಲಿ ಬುಧವಾರ ನಸುಕಿನ 1:15ರ ಸುಮಾರಿಗೆ ಮೂರು ಮಧ್ಯಮ ತೀವ್ರತೆಯ ಸ್ಫೋಟಗಳು ಸಂಭವಿಸಿದ್ದು, ಸೇತುವೆಯೊಂದಕ್ಕೆ ಹಾನಿಯಾಗಿದೆ. ಇಂಫಾಲ ಮತ್ತು ನಾಗಾಲ್ಯಾಂಡ್ ನ ದಿಮಾಪುರ ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ-2ರ ಸಪರಮೀನಾ ಬಳಿ ಈ ಸ್ಫೋಟಗಳು ಸಂಭವಿಸಿವೆ. ಎ.26ರಂದು ಔಟರ್ ಮಣಿಪುರ ಕ್ಷೇತ್ರದಲ್ಲಿ ಮತದಾನ ನಡೆಯಲಿದೆ.

ಈವರೆಗೆ ಯಾವುದೇ ಗುಂಪು ಸ್ಫೋಟಗಳ ಹೊಣೆಯನ್ನು ವಹಿಸಿಕೊಂಡಿಲ್ಲ. ತನಿಖೆ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದರು. ಘಟನಾ ಸ್ಥಳದ ಜೊತೆಗೆ ಸಮೀಪದ ಪ್ರದೇಶಗಳನ್ನೂ ನಿರ್ಬಂಧಿಸಿರುವ ಭದ್ರತಾ ಪಡೆಗಳು ಇತರ ಸೇತುವೆಗಳಲ್ಲಿ ತಪಾಸಣೆಗಳನ್ನು ಕೈಗೊಂಡಿವೆ. ವಾಹನಗಳ ಸಂಚಾರಗಳ ಮೇಲೆ ನಿರ್ಬಂಧ ಹೇರಲಾಗಿದ್ದು, ಸ್ಥಳೀಯರಿಗೆ ತೊಂದರೆಯಾಗಿದೆ.

ಎ.19ರಂದು ನಡೆದಿದ್ದ ಮೊದಲ ಹಂತದ ಮತದಾನದ ಸಂದರ್ಭ ಮಣಿಪುರದ ಕೆಲವು ಭಾಗಗಳಲ್ಲಿ ಹಿಂಸಾಚಾರದ ಘಟನೆಗಳು ವರದಿಯಾಗಿದ್ದು, ಎ.22ರಂದು ಇನ್ನರ್ ಮಣಿಪುರ ಲೋಕಸಭಾ ಕ್ಷೇತ್ರದ 11 ಮತಗಟ್ಟೆಗಳಲ್ಲಿ ಮರುಮತದಾನ ನಡೆಸಲಾಗಿತ್ತು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News