×
Ad

ಮಣಿಪುರ ಹಿಂಸಾಚಾರ: ನಾಳೆ ಗುಜರಾತಿನ ಬುಡಕಟ್ಟು ಪ್ರದೇಶದಲ್ಲಿ ಬಂದ್ ಆಚರಣೆ

Update: 2023-07-22 23:24 IST

ಸಾಂದರ್ಭಿಕ ಚಿತ್ರ | Photo: PTI

ಅಹ್ಮದಾಬಾದ್: ಮಣಿಪುರದಲ್ಲಿಯ ಜನಾಂಗೀಯ ಹಿಂಸಾಚಾರ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ವಿರೋಧಿಸಿ ರವಿವಾರ ಗುಜರಾತಿನ ಬುಡಕಟ್ಟು ಪ್ರದೇಶಗಳಲ್ಲಿ ಬಂದ್ ಆಚರಿಸಲಾಗುವುದು ಎಂದು ಬುಡಕಟ್ಟು ನಾಯಕರೋರ್ವರು ಶನಿವಾರ ತಿಳಿಸಿದರು.

ಮಣಿಪುರದಲ್ಲಿಯ ಸ್ಥಿತಿಯನ್ನು ನಿಯಂತ್ರಿಸುವಲ್ಲಿ ಆಡಳಿತಾರೂಢ ಬಿಜೆಪಿಯ ವೈಫಲ್ಯದ ವಿರುದ್ಧ ಪ್ರತಿಭಟಿಸಲು ಬಂದ್ಗೆ ಬೆಂಬಲ ನೀಡಲು ಪ್ರತಿಪಕ್ಷ ಕಾಂಗ್ರೆಸ್ ನಿರ್ಧರಿಸಿದೆ ಎಂದು ಪಕ್ಷದ ವಕ್ತಾರ ಮನೀಷ ದೋಶಿ ಹೇಳಿದರು.

ಆದಿವಾಸಿ ಏಕ್ತಾ ಮಂಚ್ ಸೇರಿದಂತೆ ಹಲವು ಬುಡಕಟ್ಟು ಸಂಘಟನೆಗಳು ಗುಜರಾತಿನ ಬುಡಕಟ್ಟು ಪ್ರಾಬಲ್ಯದ ಜಿಲ್ಲೆಗಳಲ್ಲಿ ಬಂದ್ಗೆ ಕರೆ ನೀಡಿವೆ.

ಮಣಿಪುರದಲ್ಲಿಯ ಹಿಂಸಾಚಾರ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ,ಮಧ್ಯಪ್ರದೇಶ ಮೂತ್ರ ವಿಸರ್ಜನೆ ಘಟನೆ ಹಾಗೂ ಗುಜರಾತಿನಲ್ಲಿ ಆದಿವಾಸಿಗಳ ಮೇಲೆ ದೌರ್ಜನ್ಯಗಳನ್ನು ವಿರೋಧಿಸಿ ರವಿವಾರ ಬುಡಕಟ್ಟು ಪ್ರಾಬಲ್ಯದ ಜಿಲ್ಲೆಗಳಲ್ಲಿ ಬಂದ್ ಆಚರಿಸಲಾಗುವುದು ಎಂದು ಇತ್ತೀಚಿಗಷ್ಟೇ ಆಪ್ಗೆ ರಾಜೀನಾಮೆ ನೀಡಿರುವ ಬುಡಕಟ್ಟು ನಾಯಕ ಪ್ರಫುಲ್ ವಾಸವ ತಿಳಿಸಿದರು.

ದೇಶದ ಪರಿಶಿಷ್ಟ ಪಂಗಡಗಳ ಜನಸಂಖ್ಯೆಯ ಸುಮಾರು ಶೇ.8ರಷ್ಟು ಗುಜರಾತಿನ ನಿವಾಸಿಗಳಾಗಿದ್ದು,ರಾಜ್ಯದ ಪೂರ್ವ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News