×
Ad

ಮಣಿಪುರ ಹಿಂಸಾಚಾರ: ಮಹಿಳೆಯ ಮುಖಕ್ಕೇ ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು

Update: 2023-07-16 21:32 IST

ಸಾಂದರ್ಭಿಕ ಚಿತ್ರ

ಇಂಫಾಲ: ಮಣಿಪುರದ ಇಂಫಾಲ ಪೂರ್ವ ಜಿಲ್ಲೆಯ ಸವಂಬಂಗ್ ಪ್ರದೇಶದಲ್ಲಿ ಶನಿವಾರ ಸಂಜೆ ಶಸ್ತ್ರಸಜ್ಜಿತ ದುಷ್ಕರ್ಮಿಗಳು 50ರ ಹರೆಯದ ಮಹಿಳೆಯ ಮುಖಕ್ಕೆ ಗುಂಡಿಕ್ಕಿ ಕೊಂದಿದ್ದು, ಆಕೆಯ ಮುಖ ಗುರುತು ಹಿಡಿಯಲಾಗದಷ್ಟು ವಿರೂಪಗೊಂಡಿತ್ತು.

ಬೀಯುಲಾಹರಂ ಗ್ರಾಮದ ನಿವಾಸಿ ಲೂಸಿ ಮರಿಮ್ ಮಾರಿಂಗ್ ಮೃತ ಮಹಿಳೆಯಾಗಿದ್ದು,ಆಕೆಯ ಮನೆಯಲ್ಲಿಯೇ ಹತ್ಯೆ ನಡೆದಿದೆ.

ಘಟನೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ಮನೆಗಳನ್ನು ಗುಂಪೊಂದು ಸುಟ್ಟುಹಾಕಿದೆ.

ಲಾಮಲೈ ಠಾಣಾ ಪೊಲೀಸರು ಮುಂದಿನ ತನಿಖೆಯನ್ನು ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News