×
Ad

ರೈಲು ಹಳಿ ಸ್ಫೋಟಿಸಿದ ಮಾವೋವಾದಿಗಳು; 13 ರೈಲುಗಳ ಸಂಚಾರ ರದ್ದು

Update: 2023-12-22 21:41 IST

Photo: PTI 

ರಾಂಚಿ: ಜಾರ್ಖಂಡ್ ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ರೈಲ್ವೆ ಹಳಿಯನ್ನು ನಿಷೇಧಿತ ಸಿಪಿಐ (ಮಾವೋವಾದಿ) ಸದಸ್ಯರು ಸ್ಫೋಟಿಸಿದ್ದಾರೆ.

ಇದರಿಂದ ಹೌರಾಹ್-ಮುಂಬೈ ನಡುವಿನ ಹಳಿಯಲ್ಲಿ ರೈಲು ಸಂಚಾರಕ್ಕೆ ಹಲವು ಗಂಟೆಗಳ ಕಾಲ ಅಡ್ಡಿ ಉಂಟಾಯಿತು ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಘಟನೆಯ ಹಿನ್ನೆಲೆಯಲ್ಲಿ ಕನಿಷ್ಠ 13 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ ಹಾಗೂ ಒಂದು ರೈಲಿನ ಪಥವನ್ನು ಬದಲಾಯಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ

ರಾಜ್ಯ ರಾಜಧಾನಿ ರಾಂಚಿಯಿಂದ ಸುಮಾರು 150 ಕಿ.ಮೀ. ದೂರದಲ್ಲಿರುವ ಮಹಾದೇವ್ಸಾಲ್ ಹಾಗೂ ಪೊಸೊಯಿಟಾ ನಿಲ್ದಾಣಗಳ ನಡುವೆ ಆಗ್ನೇಯ ರೈಲ್ವೇಯ ಚಕ್ರಧರ ವಿಭಾಗದಲ್ಲಿ ಗುರುವಾರ ತಡ ರಾತ್ರಿ ಈ ಘಟನೆ ಸಂಭವಿಸಿದೆ ಎಂದು ಪಶ್ಚಿಮ ಸಿಂಗ್ಭೂಮ್ನ ಪೊಲೀಸ್ ಅಧೀಕ್ಷಕ ಅಶುತೋಶ್ ಶೇಖರ್ ತಿಳಿಸಿದ್ದಾರೆ.

‘‘ಈ ಪ್ರದೇಶದಲ್ಲಿ ಮಾವೋವಾದಿಗಳು ಬ್ಯಾನರ್ ಹಾಗೂ ಪೋಸ್ಟರ್ಗಳನ್ನು ಅಳವಡಿಸಿದ್ದಾರೆ. ಘಟನೆಯ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ’’ ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News