×
Ad

ಮಹಾರಾಷ್ಟ್ರ ವಿಧಾನಸಭೆ | ಚುನಾವಣಾ ಕಣದಿಂದ ಹಿಂದೆ ಸರಿದ ಮನೋಜ್ ಜಾರಂಗೆ

Update: 2024-11-04 11:23 IST

ಮನೋಜ್ ಜಾರಂಗೆ (PTI)

ಮುಂಬೈ: ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜಾರಂಗೆ ಸೋಮವಾರ ಹೇಳಿದ್ದಾರೆ.

ಈ ತಿಂಗಳು ನಡೆಯಲಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮರಾಠವಾಡ ಪ್ರದೇಶದಲ್ಲಿನ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ವಿರುದ್ಧ ಸ್ಪರ್ಧಿಸುವ 10 ರಿಂದ 15 ಅಭ್ಯರ್ಥಿಗಳನ್ನು ಬೆಂಬಲಿಸುವುದಾಗಿ ಅವರು ಘೋಷಿಸಿದ್ದ ಕೆಲವೇ ಗಂಟೆಗಳ ನಂತರ, ಈ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಮನೋಜ್ ಅವರು ಮರಾಠರಿಗೆ ನ್ಯಾಯ ಕೊಡಿಸದವರ ವಿರುದ್ಧ ಮಾತ್ರ ಕೆಲಸ ಮಾಡುವ ತೀರ್ಮಾನಕ್ಕೆ ಅವರು ಬಂದಿದ್ದಾರೆ ಎನ್ನಲಾಗಿದೆ.

“ಒಂದು ಜಾತಿಯ ಬಲದಿಂದ ಚುನಾವಣೆಗೆ ಸ್ಪರ್ಧಿಸಿ ಗೆಲ್ಲಲು ಸಾಧ್ಯವಿಲ್ಲ. ನಾವು ರಾಜಕೀಯಕ್ಕೆ ಹೊಸಬರು, ಅಭ್ಯರ್ಥಿಯನ್ನು ಕಣಕ್ಕಿಳಿಸಿ ಅವರು ಸೋತರೆ ಅದು ಜಾತಿಗೆ ಅವಮಾನ. ಆದ್ದರಿಂದ ತಮ್ಮ ನಾಮಪತ್ರ ಹಿಂಪಡೆಯಲು ಎಲ್ಲಾ ಮರಾಠಾ ಅಭ್ಯರ್ಥಿಗಳಲ್ಲಿ ನಾನು ವಿನಂತಿಸುತ್ತೇನೆ," ಎಂದು ಅವರು ಮಾಧ್ಯಮಗಳಿಗೆ ತಿಳಿಸಿದರು.

ಮರಾಠರಿಗೆ ಮೀಸಲಾತಿಗಾಗಿ ಒತ್ತಾಯಿಸಿ ಉಪವಾಸ ಸತ್ಯಾಗ್ರಹದ ಸಂದರ್ಭದಲ್ಲಿ ರಾಷ್ಟ್ರೀಯ ಸುದ್ದಿಯಾಗಿದ್ದ ಮನೋಜ್ ಜಾರಂಗೆ ಅವರು, ಮರಾಠವಾಡ ಪ್ರದೇಶದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿಯ ಶಾಸಕರ ವಿರುದ್ಧ ಸ್ಪರ್ಧಿಸುವ ಮರಾಠಿ ಅಭ್ಯರ್ಥಿಗಳನ್ನು ಬೆಂಬಲಿಸುವುದಾಗಿ ಈ ಹಿಂದೆ ಹೇಳಿದ್ದರು. ಈ ಪ್ರದೇಶವು ಛತ್ರಪತಿ ಸಂಭಾಜಿನಗರ, ಬೀಡ್, ಹಿಂಗೋಲಿ, ಜಲ್ನಾ, ಲಾತೂರ್, ನಾಂದೇಡ್, ಒಸ್ಮಾನಾಬಾದ್ ಮತ್ತು ಪರ್ಭಾನಿ ಜಿಲ್ಲೆಗಳನ್ನು ಒಳಗೊಂಡಿದೆ.

ಮನೋಜ್ ಜಾರಂಗೆ ಅವರು ಚುನಾವಣೆಯಿಂದ ಹಿಂದೆ ಸರಿಯುವ ನಿರ್ಧಾರದಿಂದ ಶಿವಸೇನೆ (ಯುಬಿಟಿ), ಕಾಂಗ್ರೆಸ್ ಮತ್ತು ಶರದ್ ಪವಾರ್ ಅವರ ಎನ್‌ಸಿಪಿಯ ಮಹಾ ವಿಕಾಸ್ ಅಘಾಡಿಗೆ ಲಾಭದಾಯಕವಾಗಲಿದೆ ಎನ್ನಲಾಗಿದೆ. ಅವರ ಈ ನಿರ್ಧಾರದಿಂದ ಅದು ಬಿಜೆಪಿ ವಿರೋಧಿ ಮತಗಳ ವಿಭಜನೆಯನ್ನು ತಡೆಯಲಿದೆ ಎಂಬ ಲೆಕ್ಕಾಚಾರ ಶುರುವಾಗಿದೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News