×
Ad

ಟ್ರಂಪ್ ರ ಸುಂಕ ಭಯೋತ್ಪಾದನೆ ವಿರುದ್ಧ ಸದೃಢ ಕ್ರಮಕ್ಕಾಗಿ ಕೇಂದ್ರಕ್ಕೆ ಮಾಯಾವತಿ ಆಗ್ರಹ

Update: 2025-09-07 23:03 IST

ಲಕ್ನೋ,ಸೆ.7: ಭಾರತದ ಉತ್ಪನ್ನಗಳ ಮೇಲಿನ ಸುಂಕದ ದರದಲ್ಲಿ ಅಮೆರಿಕ ಭಾರೀ ಏರಿಕೆ ಮಾಡಿರುವುದನ್ನು ಬಿಎಸ್ಪಿ ಅಧ್ಯಕ್ಷೆ ಮಾಯಾವತಿ ರವಿವಾರ ತೀವ್ರವಾಗಿ ಖಂಡಿಸಿದ್ದು, ಇದು ‘ಟ್ರಂಪ್ ಅವರ ಸುಂಕ ಭಯೋತ್ಪಾದನೆ’ ಎಂದು ಬಣ್ಣಿಸಿದ್ದಾರೆ.

ಲಕ್ನೋದಲ್ಲಿ ನಡೆದ ಬಿಎಸ್ಪಿ ಪಕ್ಷದ ಪರಾಮರ್ಶನಾ ಸಭೆಯಲ್ಲಿ ಮಾತನಾಡಿದ ಅವರು, ಟ್ರಂಪ್ ಅವರ ಸುಂಕ ಭಯೋತ್ಪಾದನೆಯಿಂದ ಉದ್ಭವಿಸಿರುವ ಸನ್ನಿವೇಶವನ್ನು ನಿಭಾಯಿಸಲು ಆಡಳಿತಾರೂಢ ಬಿಜೆಪಿಯು ದೇಶದ ಜನತೆಗಾಗಿ ಸದೃಢ ಹಾಗೂ ಅರ್ಥಪೂರ್ಣ ಸುಧಾರಣೆಗಳನ್ನು ಉಪಕ್ರಮಿಸುವುದು ಅನಿವಾರ್ಯವಾಗಿದೆ. ಒಂದು ವೇಳೆ ಹಾಗೆ ಮಾಡದೆ ಇದ್ದಲ್ಲಿ ಬಡತನ, ಹಣದುಬ್ಬರ, ನಿರುದ್ಯೋಗ, ಅನಕ್ಷರತೆ,ವಲಸೆ ಸಮಸ್ಯೆಗಳು ಶೋಚನೀಯವಾಗಲಿವೆ ಹಾಗೂ ದೇಶದ ಘನತೆ ಮತ್ತು ಅದರ ಜಾಗತಿಕ ಸ್ಥಾನಮಾನದ ಮೇಲೆ ಪರಿಣಾಮ ಬೀರಲಿದೆಯೆಂದು ಅವರು ಹೇಳಿದ್ದಾರೆ.

ಭಾರತ-ಅಮೆರಿಕ ವಿಶೇಷ ಬಾಂಧವ್ಯವನ್ನು ಹೊಂದಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಹೇಳಿಕೆಗೆ ಪೂರ್ಣವಾಗಿ ಪ್ರತಿಸ್ಪಂದಿಸುವುದಾಗಿ ಪ್ರಧಾನಿ ಮೋದಿ ತಿಳಿಸಿದ ಮರುದಿನವೇ ಮಾಯಾವತಿ ಹೀಗೆ ಪ್ರತಿಕ್ರಿಯಿಸಿದ್ದಾರೆ.

ಭಾರತದಿಂದ ಆಮದು ಮಾಡಿಕೊಳ್ಳಲಾಗುವ ಸಾಮಾಗ್ರಿಗಳ ಮೇಲೆ ಟ್ರಂಪ್ ಅವರು ಶೇ.50 ಸುಂಕವನ್ನು ವಿಧಿಸಿರುವುದರ ಬಿಸಿ ಉತ್ತರಪ್ರದೇಶದಲ್ಲಿರುವ ಪ್ರಮುಖ ರಫ್ತು ಕೇಂದ್ರಗಳಿಗೆ ತಟ್ಟಿದೆ. ಟ್ರಂಪ್ ಅವರ ಕ್ರಮದಿಂದಾಗಿ ದೇಶದಲ್ಲಿ ಉದ್ಯೋಗ ನಷ್ಟ, ರಫ್ತು ಆರ್ಡರ್ಗಳ ನಿಲುಗಡೆ ಹಾಗೂ ಮಾರುಕಟ್ಟೆ ಕುಸಿತದ ಸಾಧ್ಯತೆಯಿದ ಆಮದುದಾರರು ಎಚ್ಚರಿಕೆ ನೀಡಿದ್ದಾರೆ.

ಹಲವು ವರ್ಷಗಳ ಪರಿಶ್ರಮದಿಂದಾಗಿ ಭಾರತೀಯ ಉತ್ಪನ್ನಗಳಿಗೆ ನಿರ್ಮಿಸಲಾದ ಮಾರುಕಟ್ಟೆಯು ಈಗ ಅಪಾಯದಲ್ಲಿದೆ ಎಂದು ಅವರು ಹೇಳಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News