×
Ad

ಭಾರತಕ್ಕೆ ಆಗಮಿಸಲು ಸಾಧ್ಯವಿಲ್ಲ ; ಮತ್ತೊಂದು ಕಾರಣ ನೀಡಿದ ಮೆಹುಲ್ ಚೋಕ್ಸಿ

Update: 2025-02-28 22:35 IST

ಮೆಹುಲ್ ಚೋಕ್ಸಿ | PC : ANI 

ಮುಂಬೈ: ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆ ಎದುರಿಸಲು ತಾನು ಭಾರತಕ್ಕೆ ಆಗಮಿಸುವ ಸ್ಥಿತಿಯಲ್ಲಿ ಇಲ್ಲ ಎಂದು ಪ್ರಕರಣದ ಸಹ ಆರೋಪಿ ಮೆಹುಲ್ ಚೋಕ್ಸಿ ಮುಂಬೈ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಪ್ರಸಕ್ತ ಬೆಲ್ಜಿಯಂನಲ್ಲಿ ವಾಸಿಸುತ್ತಿರುವ ಮೆಹುಲ್ ಚೋಕ್ಸಿ, ತಾನು ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿರುವುದಾಗಿ ನ್ಯಾಯಾಲಯಕ್ಕೆ ಹೇಳಿದ್ದಾರೆ.

ಮುಂಬೈ ನ್ಯಾಯಾಲಯದಲ್ಲಿ ಸಲ್ಲಿಸಲಾದ ವಿಶೇಷ ಮನವಿಯಲ್ಲಿ ಚೋಕ್ಸಿ, ತಾನು ದೀರ್ಘಕಾಲೀನ ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದೇನೆ ಎಂದು ಹೇಳಿದ್ದಾರೆ. ಅಲ್ಲದೆ, ಮನವಿಯೊಂದಿಗೆ ವೈದ್ಯಕೀಯ ವರದಿಗಳು ಹಾಗೂ ಚೋಕ್ಸಿ ಪ್ರಯಾಣಿಸಲು ಶೇ. 100 ಅಸಮರ್ಥರು ಎಂದು ಆ್ಯಂಟ್‌ವೆರ್ಪ್ (ಬೆಲ್ಚಿಯಂನ ನಗರ) ಮೂಲದ ವೈದ್ಯರು ನೀಡಿದ ಅಭಿಪ್ರಾಯವನ್ನು ಕೂಡ ಸಲ್ಲಿಸಿದ್ದಾರೆ.

ಈ ಹಿಂದೆ ಅವರು ತಾನು ಆ್ಯಂಟಿಗುವಾದಲ್ಲಿ ಅಪಹರಣಕ್ಕೆ ಒಳಗಾಗಿದ್ದೇನೆ ಎಂದು ಆರೋಪಿಸಿದ್ದರು. ಅಲ್ಲದೆ, ಇದರಿಂದ ತಾನು ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದೇನೆ ಎಂದು ಹೇಳಿದ್ದರು.

ಭಾರತ 2 ದಶಲಕ್ಷ ಡಾಲರ್ ಬ್ಯಾಂಕ್ ವಂಚನೆ ಪ್ರಕರಣದ ತನಿಖೆ ನಡೆಸುತ್ತಿದ್ದು, ತನಿಖಾ ಸಂಸ್ಥೆ ಚೋಕ್ಸಿಯ ಕಸ್ಟಡಿ ಕೋರಿದೆ. ಈ ಪ್ರಕರಣದಲ್ಲಿ ಚೋಕ್ಸಿ ಹಾಗೂ ಆತನ ಸೋದರಳಿಯ ನೀರವ್ ಮೋದಿ ಆರೋಪಿಗಳಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News