×
Ad

ಮಿಝೋರಾಂನಲ್ಲಿ ಮತ ಎಣಿಕೆ ಆರಂಭ :ಆಡಳಿತಾರೂಢ ಎಂ ಎನ್ ಎಫ್ ಗೆ ಆರಂಭಿಕ ಮುನ್ನಡೆ

Update: 2023-12-04 08:32 IST

ಹೊಸದಿಲ್ಲಿ, ಡಿ ೪ : ಮಿಝೋರಾಂ ವಿಧಾನಸಭಾ ಚುನಾವಣೆಯ ಮತ ಎಣಿಕೆ ಸೋಮವಾರ ಬೆಳಗ್ಗೆ 8 ಗಂಟೆಗೆ ಆರಂಭವಾಗಿದ್ದು ಅಲ್ಲಿನ ಆಡಳಿತಾರೂಢ ಎಂ ಎನ್ ಎಫ್ 4 ಸ್ಥಾನಗಳಲ್ಲಿ ಹಾಗು ಝಡ್ ಪಿ ಎಂ 3 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿರುವುದಾಗಿ ವರದಿ ಬಂದಿದೆ. ಇದು ಆರಂಭಿಕ ಮುನ್ನಡೆ ಮಾತ್ರ.

ಕಾಂಗ್ರೆಸ್ ಒಂದು ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ. ಮಿಝೋರಾಂ ವಿಧಾನಸಭೆ 40 ಸದಸ್ಯ ಬಲವನ್ನು ಹೊಂದಿದೆ. ಮಧ್ಯ ಪ್ರದೇಶ, ರಾಜಸ್ತಾನ, ಛತ್ತೀಸ್ ಗಢ ಹಾಗು ತೆಲಂಗಾಣಗಳ ಜೊತೆಗೆ ಮಿಝೋರಾಂ ಗೆ ಚುನಾವಣೆ ನಡೆದಿತ್ತು. ಆ ನಾಲ್ಕು ರಾಜ್ಯಗಳಲ್ಲಿ ನಿನ್ನೆ ಮತ ಎಣಿಕೆ ನಡೆದಿತ್ತು. ಮಿಝೋರಾಂ ನಲ್ಲಿ ಇವತ್ತು ಮತ ಎಣಿಕೆ ನಡೆಯುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News