ಸ್ವಾತಂತ್ರ್ಯ ದಿನಾಚರಣೆ | ರಾಜ್ಯಪಾಲ ಆರ್.ಎನ್. ರವಿ ಏರ್ಪಡಿಸಿರುವ ಚಹಾ ಕೂಟ ಬಹಿಷ್ಕರಿಷಲು ತಮಿಳುನಾಡು ಸಿಎಂ ನಿರ್ಧಾರ
“ರಾಜ್ಯಪಾಲರು ತಮಿಳುನಾಡಿನ ಜನರ ಹಿತಾಸಕ್ತಿಗಳಿಗೆ ವಿರುದ್ಧವಾಗಿ ವರ್ತಿಸುತ್ತಿದ್ದಾರೆ”
Update: 2025-08-15 11:54 IST
File Photo: credit - ANI
ಚೆನ್ನೈ: 79ನೇ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆ ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಅವರು ಆಯೋಜಿಸಿರುವ ಚಹಾ ಕೂಟವನ್ನು ಬಹಿಷ್ಕರಿಸಲು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನಿರ್ಧರಿಸಿದ್ದಾರೆ. ಈ ಮೂಲಕ ರಾಜಭವನ ಮತ್ತು ರಾಜ್ಯ ಸರಕಾರದ ನಡುವಿನ ಸಂಘರ್ಷ ಮತ್ತಷ್ಟು ತಾರಕಕ್ಕೇರಿದೆ.
ಶುಕ್ರವಾರ ಸಂಜೆ ರಾಜ್ಯಪಾಲರ ನಿವಾಸದಲ್ಲಿ ಚಹಕೂಟವನ್ನು ಏರ್ಪಡಿಸಲಾಗಿದೆ. “ರಾಜ್ಯಪಾಲರು ತಮಿಳುನಾಡಿನ ಜನರ ಹಿತಾಸಕ್ತಿಗಳಿಗೆ ವಿರುದ್ಧವಾಗಿ ವರ್ತಿಸುತ್ತಿದ್ದಾರೆ” ಎಂದು ಡಿಎಂಕೆ ಸರಕಾರ ಆರೋಪಿಸಿದೆ.
ಇದಲ್ಲದೆ ರಾಜ್ಯಪಾಲ ಆರ್.ಎನ್.ರವಿ ಅವರ ವಿರುದ್ಧದ ಪ್ರತಿಭಟನೆಯ ಭಾಗವಾಗಿ ಉನ್ನತ ಶಿಕ್ಷಣ ಸಚಿವ ಗೋವಿ ಚೆಝಿಯಾನ್ ಅವರು ಆಗಸ್ಟ್ 18 ಮತ್ತು 19ರಂದು ಅಳಗಪ್ಪ ಮತ್ತು ತಿರುವಳ್ಳುವರ್ ವಿಶ್ವವಿದ್ಯಾಲಯಗಳಲ್ಲಿ ನಡೆಯುವ ಘಟಿಕೋತ್ಸವ ಸಮಾರಂಭವನ್ನು ಬಹಿಷ್ಕರಿಸಲಿದ್ದಾರೆ ಎಂದು ತಿಳಿದು ಬಂದಿದೆ.